ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಯ್ಬಡಿಕರಿಂದ ನಾನು ಬದುಕಿದೆನು - ಅವರು -|ಮಾಡಿದುಪಕಾರವ ಮರೆಯೆ ಶ್ರೀ ಹರಿಯೆ ಪಹಂಗಿಸಿ ಹಂಗಿಸಿ ಮನವ ಹರಿಯಲಿ ನಿಲಿಸಿದರು |ಭಂಗಿಸಿ ಭಂಗಿಸಿ ಬಯಲಾಸೆ ಕೆಡೆಸಿದರು ||ಕಂಗೆಡಿಸಿ ಕಂಗೆಡಿಸಿ ಕಾಮ ಕ್ರೋಧ ಬಿಡಿಸಿದರು |ಹಂಗಿಸಿದವರೆನ್ನಪರಮಬಂಧುಗಳು1ಜಾಡಿಸಿ ಜಾಡಿಸಿ ಎನ್ನ ಜನ್ಮಗಳ ಕಳೆದರು |ಹೂಡಿಸಿ ಹೂಡಿಸಿ ಹುಟ್ಟು ಹೊಂದುಗೊಳಿಸಿದರು ||ಪೀಡಿಸಿ ಪೀಡಿಸಿ ಎನ್ನ ಪ್ರಯತ್ನವ ಕಳೆದರು |ಕಾಡಿ ಕಾಡಿಕೈವಲ್ಯಪದವಿತೋರಿದರು2ಕಾಸು ಮುಟ್ಟಿದಾಗಕಾಯಪ್ರಾಯಶ್ಚಿತ್ತಕಿಕ್ಕಿದರು |ದೂಷಿಸಿ ದೂಷಿಸಿನಿರ್ದೋಷಮಾಡಿದರು ||ಲೇಸನು ಕೊಡು ನಮ್ಮಪುರಂದರವಿಠಲನೆ ||ದಾಸನೆಂದೆನಿಸುವರನುದಿನದಲಿ ಎನ್ನ 3
--------------
ಪುರಂದರದಾಸರು