ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರುತನ ನಿಜ ಜಾಯೆ ಪ ಬಾರಿ ಬಾರಿಗೆ ನಿನ್ನ ಚರಣವ ಸ್ಮರಿಸುವೆ ಚಾರುಮತಿಯನೀಯೆ ಅ.ಪ. ಮೂರನೆ ಯುಗದಲಿ ಧೀರ ದ್ರುಪದನಧ್ವರದೊಳುದಿಸಿ ಶೂರ ಪಾಂಡವರೈವರ ವೀರಪತ್ನಿಯು ನೀನೆನಿಸಿ ಕೌರವನ ಸಭೆಯಲಿ ಸೀರೆಯನು ಸೆಳೆಯಲು ನೀ ಮಾರಪಿತನ ಭಜಿಸಿ ಭೂರಿವಸನ ಪೊಂದಿದೆ ಧೀರೆ 1 ವೀರ ಮಾರುತಿಯ ಗದೆ ಕುರುಪನ ಊರು ಮುರಿಯಲೆಂದು ವಾರಿಧಿ ಮಿತಿ ಮೀರುತಿರೆ ನೀ ಸಾರಿದೆ ಪತಿಗಳ ಗಂಭೀರೆ 2 ಆ ರಣಾಗ್ರದಿ ಕ್ರೂರ ದುಶ್ಶಾಸನ ಸಾರಿ ಬರುವುದ ನೋಡಿ ದಾರಿ ಹಿಡಿದಪ್ಪಳಿಸವನ ದೋರೆ ಕರುಳ ಹಿರಿದೀಡ್ಯಾಡಿ ಮೋರೆಯಿರಿದು ಪಲ್ಮುರಿದು ಹಂಗಿಸಿದಂಥ- ಸತಿ 3
--------------
ರಂಗೇಶವಿಠಲದಾಸರು