ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ ತಾಳು ಕ್ಷಮೆಯ ಕೃಪೆದೋರಿ ಕೇಳು ಸಂಸೃತಿ ದುಃಖ ತಾಳಲಾರೆನು ಮಾತ ನಾಲಿಸು ಮಲ್ಲಕಂಸಾರಿ ಪ. ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು ಸಾರಿ ಕಡೆಗೆ ಮಾನುಷ್ಯವನು ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ ಗಾರು ಮಾಡುವುದನೇನೆಂಬೆ 1 ದೂರಾಪುರದ ಕಾಮ ವಾರುಧಿವಳಗೀಸ ಲಾರದೆ ಬಾಯಬಿಟ್ಟೊರವೆ ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು- ರಾರಿ ನೀನ್ಯಾಕೆನ್ನ ಮರೆವೆ 2 ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ ಮುದ್ದೆಯಂತಾಯ್ತನಂತರದಿ ಹದ್ದಿನಂದದಿ ಹಂಗಿನನ್ನವ ಕಾಯುತ್ತ ಇದ್ದೆನು ಪರರ ಮಂದಿರದಿ 3 ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು ಬಿದ್ದು ಹೊರಳಿ ಬಹು ಬಳಲಿ ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ- ರುದ್ಧರಿಸೆನ್ನ ಬೇಗದಲಿ 4 ನೇಮವ್ರತಗಳನೊಂದಾದರು ಮಾಡದೆ ಕಾಮಲಾಲಸನಾದೆ ಬರಿದೆ ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ ಧಾಮನ ಬಿಡೆ ನಿನ್ನ ಸ್ಮರಣೆ 5 ಸಾಮಜೋದ್ಧಾರ ಸಕಲಸುರವೈರಿ ನಿ- ರ್ನಾಮವತಾರ ಭೂಧಾರ ನಿತ್ಯ ಸವಿದು ಬಾಳುವ ಮುಖ್ಯ ಕಾಮಿತಾರ್ಥವ ನೀಡು ವರದಾ 6 ಸುರಮುನಿ ಪಿತೃಋಣ ಭರವ ನೀಗುವ ಮೂರು ಕಾಲ ಕಳೆದೆ ವರ ದೇವಾಲಯ ಕೂಪಾ ರಾಮಯಜ್ಞಾದಿ ಸ- ತ್ಕರಗಳ ವಾರ್ತೆಯ ತೊರೆದೆ 7 ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ ಸರಿಯಲ್ಲ ಎನಗೆಂದು ತಿಳಿದೆ ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ- ಳಿರುವೆ ಈ ಪರಿಯಿನ್ನು ಥರವೆ 8 ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ ಸಾಕೆಂಬ ಶ್ರುತಿ ಪುರಾಣಗಳು ವಾಕಾನುವಾಕುಗಳು ಸುರಿದ ಸರ್ವಜ್ಞ ಶ್ರೀಕರ ಪಾದದ ಮತವ 9 ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ- ನ್ಯಾಕಿನ್ನು ಡಾಂಭಿಕರ ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ ಬೇಕು ಶ್ರೀವರ ನಿನ್ನ ಪಥವಾ 10
--------------
ತುಪಾಕಿ ವೆಂಕಟರಮಣಾಚಾರ್ಯ
ಘನತಾಪ ಘನತಾಪ ಘನತಾಪ ಸಂಸಾರ ನೆನೆಸಲಳವಲ್ಲದನು ಕನಸಿನೋಳಭವ ಪ ಕ್ಷಣಹೊತ್ತು ಮನಸನ್ನು ಸನುಮತಯಿರಗೊಡದು ಗಣನೆಯಿಲ್ಲದ ತಾಪವನೆ ಒದಗಿಪುದಭವ ಅ.ಪ ವನಿತೆಯರ ತಿನಿಸು ತನುಜ ಅನುಜರ ಮುನಿಸು ಜನರನೊಲಿಸುವುದಿನಿಸು ಘನತಾಪ ಅಭವ ತನುರೋಗ ಮನರೋಗ ಧನದ ವಿಯೋಗ ಇನಿತೆಲ್ಲವೊಂದಾಗಿ ಘನಬಾಧಿಸುವುವಭವ 1 ಕೊಟ್ಟ ಒಡೆಯರು ಬಂದು ನಿಷ್ಠೂರಾಡುತ ಬಲು ಕಟ್ಟಿಕಾದುವ ಮಹಕೆಟ್ಟತಾಪಭವ ತಾಪ ಕೊಟ್ಟವರ್ಹಂಗಿನ ತಾಪ ಹುಟ್ಟುಸಾವಿನ ಅತಿ ಕಷ್ಟತಾಪಭವ 2 ಮನುಜರೂಪದ ಮಹ ಘನತೆಯನು ಕೆಡಿಸಿ ಕ್ಷಣದಿ ತೋರೆರಗುವ ಕನಿಕಷ್ಟ ಅಭವ ಇನಿತೀ ಸಂಸಾರತಾಪ ಕನಿಕರದಿಂ ಕಡೆಹಾಯ್ಸಿ ಮನಕೆ ಜಯನೀಡಿ ಕಾಯೋ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿದ್ರೌಪತಿಗೆ ಹುಚ್ಚು ಹಿಡಿಸುವ ಕೋಲ ಪ. ಧಿಟ್ಟೆರಿಬ್ಬರು ನಮಗೆ ಇಟ್ಟರು ಅಣೆಯ ಕೃಷ್ಣಯ್ಯ ಇದಕೆ ನಗಬಹುದು ಕೋಲಕೃಷ್ಣಯ್ಯ ಇದಕೆ ನಗಬಹುದು ಮುಯ್ಯವ ಕೊಟ್ಟುಬಾಹುದಕೆ ತಡವ್ಯಾಕೆ ಕೋಲ 1 ಜಾಣಿಯರಿಬ್ಬರು ನಮಗೆ ಆಣಿಯನಿಟ್ಟರು ವೇಣುಗೋಪಾಲ ನಗಬಹುದು ಕೋಲವೇಣುಗೋಪಾಲ ನಗಬಹುದು ಮುಯ್ಯವ ಕ್ಷಣದೊಳು ನಾವು ತಿರುಗಿಸುವೆವು ಕೋಲ2 ಹರಿಯ ತಂಗಿಯರ ಗರುವಿನ ಮುಯ್ಯವತಿರುಗಿಸಿ ಬಂದು ಉಣಬೇಕು ಕೋಲ ತಿರುಗಿಸಿ ಬಂದು ಉಣಬೇಕು ಎನುತಲೆ ಹರಿಣಾಕ್ಷಿ ಭಾಮೆ ನುಡಿದಳು ಕೋಲ3 ರಂಗರಾಯರ ಮುದ್ದು ತಂಗಿಯರ ಹಂಗಿನ ಮುಯ್ಯ ತಿರುಗಿಸುವೆ ಕೋಲ ಹಂಗಿನ ಮುಯ್ಯ ತಿರುಗಿಸುವೆ ಮುಖವ ಭಂಗಿಸಿ ಬಾಹೊ ಸಭೆಯೊಳು ಕೋಲ4 ಇಂತು ರಾಮೇಶನ ಕಾಂತೆಯರೆಂಬುವರ ಪಂಥವ ಬಿಡಿಸಿ ಬರಬೇಕು ಕೋಲಪಂಥವ ಬಿಡಿಸಿ ಬರಬೇಕು ಮುಯ್ಯದ ಭ್ರಾಂತಿಯ ಹಿಡಿಸಿ ಕೊಡಬೇಕು ಕೋಲ 5
--------------
ಗಲಗಲಿಅವ್ವನವರು
ಬಂದ ಜನ್ಮ ಬರಲಂಜಲ್ಯಾತ ಕಗೋ ವಿಂದ ನಿನ್ನೆಚ್ಚೆರ ವೆನಗಿದ್ದರ ಸಾಕು ಗೋವಿಂದ ಗೋವಿಂದ ಪ ಒಂದೆರಡಲ್ಲಾ ಶತ ಸಹಸ್ರವಾಗಲಿ ಛಂದದಿನಿನ್ನ ನಾಮಾ ಜಿವ್ಹೆಯ ಲಿರಲಿ1 ಹರಿಪರಂದೈವೆಂದು ಅರುಹಿನಾ ಮನೆಲಿದ್ದು ಹರಿಯದಿರಲಿ ಮನ ವಿಷಯಕ ಬಿದ್ದು 2 ಮುಕುತಿಗಿ ಕುತಿಯಂಬಾ ಹಂಗಿನ ನೆಲೆಯಾಕ ಭಕುತಿ-ಯನಿ ಪನಿಜ ಸುಖವಿರಲಿಕ್ಕೆ 3 ಗುರುಮಹಿಪತಿ ಸ್ವಾಮಿ ನಿನ್ನ ಶರಣರಾ ಮೃಗ ಪಶುವಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
--------------
ಪ್ರಸನ್ನವೆಂಕಟದಾಸರು
ರಂಗರಾಯರ ಮುಂದೆಇವರಕೊಂಗಬುದ್ಧಿಕೋಲಹೊಯ್ಸಿಹಂಗಿನ ಮುಯ್ಯ ಕಳೆದೆವಇವರ ತಂಗಿಯರಮಾರಿಭಂಗಿಸಿ ನಾವುಪ.ಅಪ್ಪ ಅರಸು ಆಗೊ ಇವರತಪ್ಪಿನ ಮಾತಿಲೆ ಸೋಲಿಸಿನಿಮ್ಮಪ್ಪ ನಿಮ್ಮರಸನೆಂಬೊಚಪ್ಪಾಳೆಯನಿಕ್ಕಿಸಿ ನಾವು 1ಒಡ ಹುಟ್ಟಿದಣ್ಣನ ದ್ರೌಪತಿಒಡಗೂಡುತಲಿ ತಾ ಇಡುವರೆಈ ಆಣೆ ನಮಗೆನುಡಿದ ಆ ನುಡಿಗೆ ನಾಚಿಸಿ ಇವರನು 2ಹುಟ್ಟು ಹೊಂದೊದೆಂಬೋದಿವರಬಿಟ್ಟು ಕಡೆಗೆ ಮಾಡಿಸಿನಾವುಶ್ರೀ ಕೃಷ್ಣನಂಫ್ರಿ ಕಮಲವನ್ನುಎಷ್ಟು ದಯದಿ ತೋರಿಸಿ 3ಅಷ್ಟ ಮದದ ತಮವು ಎಂಬೊಕುಟ್ಟಿ ಹಿಟ್ಟು ಮಾಡಿಸಿ ನಾವುಸಿಟ್ಟು ಕೋಪವೆಂಬೊ ಬಣವಿ ಒಟ್ಟಿಕೆಂಡ ಹೇರಿಸಿ ನಾವು 4ಸತ್ವರಜ ತಮವು ಎಂಬೊಕತ್ತಲೆಯ ಅಡಗಿಸಿ ನಾವುಮತ್ತೆ ಜ್ಞಾನ ಸೂರ್ಯನಪ್ರಶಸ್ತ ಉದಯ ಮಾಡಿಸಿ 5ನೀತಿ ತಪ್ಪಿದ ಬಾಲೆಯರಭೂತ ಹೊರಗೆ ಹೊರಡಿಸಿನಾವುಮಾತ್ರಗಳೆಂಬೊ ಇವರಗಾತ್ರಬಿಟ್ಟು ದೂರ ಇಡಿಸಿ6ಸಂಚಿತಗಾಮಿಯು ಇವರಕಿಂಚಿತುಳಿಯದಲೆ ಹಾರಿಸಿ ನಾವುಪಂಚ ಪಾಂಡವರ ಮಡದಿಪಾಂಚಾಲಿಯ ನಾಚಿಸಿ 7ದಶೇಂದ್ರಿಯಗಳೆಂಬೊ ಕುದುರೆಗಳದಶ ದಿಕ್ಕಿಗೆ ಓಡಿಸಿ ನಾವುಮುಸುಕು ಹಾಕಿದ ಅಂಗವನುಕೊಸರಿ ಕೊಸರಿ ಝೂಡಿಸಿ 8ನಿಂದ್ಯವಾದಪಟಲುವಿದ್ಯೆಚಿಂದಿ ಚಿಂದಿ ಮಾಡಿಸಿ ನಾವುತಂದೆ ರಾಮೇಶನ ಪಾದಕೆತಂದು ಇವರ ಹೊಂದಿಸಿ 9
--------------
ಗಲಗಲಿಅವ್ವನವರು