ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಬರವಲ್ಲಿ ಭಕುತನವಸರಕೆ ಪ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ ಹರಿ ನಿನ್ನ ದಾನಮಾಡೆ ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ 1 ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು ಪೋತ ಧ್ರುವ ಅರಣ್ಯ ಪೋಗೆ ಕಾಯ ಪೋದ್ಯಾ 2 ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ ಸರಸಿಜಾಕ್ಷಿಯ ಸೀರೆಯ ಕಾಯ ಪೋದ್ಯಾ 3 ಹಿರಣ್ಯಾಕ್ಷನನುಜ ತರಳನ ಬಾಧಿಸೆ ಥೋರ ಕಂಬದಿ ಒಡೆದು ನರಮೃಗ ರೂಪನಾಗಿ ಪೋದ್ಯಾ 4 ನೀರಡಿಸಿ ಗಜರಾಜ ಸರೋವರಕೆ ಬರಲು ನಕ್ರ ಪಿಡಿದೆಳೆಯೆ ಕಾಯ ಪೋದ್ಯಾ 5 ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ ಮರಣ ಕಾಲದಲ್ಲಜಮಿಳ ನಾರಗನೆಂದು ಕರೆಯೆ ಪೋದ್ಯಾ 6 ಕರುಣಿ ವಿಜಯ ರಾಮಚಂದ್ರವಿಠಲ ಅವರ ಸರಿ ನಾನಲ್ಲವೊ ತವ ಚರಣ ಸೇವಕರ ಸೇವಕನೊ 7
--------------
ವಿಜಯ ರಾಮಚಂದ್ರವಿಠಲ