ಕಾಮಜನಕ ಭೃಗು ರಾಮ ದಯಾಂಬುಧಿ
ಕಾಮಿತ ಫಲದಾಯಿ ಪ.
ಮಂಗಳಾಯನ ಮಾತರಿಶ್ವನುತಾ ದಯವಾಗು ದ್ವಿಯುಗ
ಶೃಂಗ ಹವ್ಯವಹಾಂತರಂಗಗತ ದು:ಕ್ಷತ್ರಹಂತಾ
ತುಂಗ ಪರಶುಧರಾಂಸಬಾಹು ನಿಭಾಂಗ ಶಾರ್ಙಶರಾಸನಾರ್ಜುನ
ದುರಿತ ತರಂಗ ಸಂಗರಮಾಂಗಸಂಗತ 1
ನೀನೆ ಗ್ರಹಪತಿಯೆಂಬುದನು ತಿಳಿದು ದುರ್ಮೋಹವಳಿದು
ತಾನು ಯನ್ನುವಹಂಕೃತಿಯು ಕಳಿದು ನಿನ್ನಲ್ಲಿ ನಲಿದು
ಸ್ನಾನ ಹೋಮ ಸುರಾರ್ಚನಾದಿಗ
ಳೇನು ಮಾಡಿದರೆಲ್ಲ ನಿನ್ನ ಸಮಾನಕರಿಪ ಮಹಾನುಭಾವನೆ 2
ಒಪ್ಪಿಸಿದೆ ಸರ್ವಸ್ವವನು ನಿನಗೆ ಗತಿ ನೀನೆ ಎನಗೆ
ಕಪ್ಪಕಾಣಿಕೆ ಎಲ್ಲವೂ ನಿನಗೆ ಇದು ಸತ್ಯ ಕೊನೆಗೆ
ಅಪ್ಪಳಿಸು ರಿಪುಪುಂಜವನು ಬರುತಿಪ್ಪದುರಿತವ ಭಂಗಿಸುತ ನ-
ಕಂದರ್ಪಭಂಜನ ಸರ್ಪಗಿರಿವರ 3