ಸಂತರೆನ ಬಹುದೈಯ್ಯಾ ಇಂಥವರಿಗೇ |
ಅಂತರಂಗದ ಹರಿ ಏಕಾಂತ ಭಕುತರೀಗೇ ಪ
ಸುಖಕ ಮೈಯ್ಯವ ಮರಿಯಾ |
ದುಃಖಗಳಿದಿಂದೇ ನೋಯ |
ಚಕಿತನಾಗನು ಕುಮತಿ ವಿಕಳ ನುಡಿಗೆ |
ಪ್ರಕಟ ಸೌಖ್ಯಕ ಹಿಗ್ಗ |
ಸಕಲರೊಳು ಹರಿಯೇ ವ್ಯಾಪಕ ವರಿದು ನಿರ |
ಹಂಕೃತಿಯನುಳ್ಳರಿಗೇ 1
ಪರಮ ಭಾಗವತೆನಿಸಿ |
ಪರರ ಮನಿಗಳಿಗ್ಹೋಗಿ |
ಪಿರಿದು ವಿದ್ಯವ ತೋರಿ ಪೊರೆಯ ನೋಡಲಾ |
ಪರಧನಕ ಕರವಿಕಲ |
ಪರಸತಿಯರಿಗೆ ಕುರುಡ |
ಪರರ ನಿಂದೆಗೆ ಮೂಕ ಪರವಶ್ಯಾದರಿಗೆ 2
ವೇಷಡಂಭಕವಿಲ್ಲಾ |
ಕ್ಲೇಶ ಕರ್ಮಗಳಿಲ್ಲಾ |
ಈ ಸಿರಿಯ ಸುಖದ ಮನದಾಶೆಯಿಲ್ಲಾ |
ವಾಸುದೇವನ ಪದ |
ಧ್ಯಾಸದನುಭವದಿ ನಟ |
ಪರಿ ಸಂಸಾರ ಲೇಶ ದೋರ್ವರಿಗೆ 3
ಹರಿಯ ನಾಮವ ನೆನೆದು |
ಹರಿಯ ಕೀರ್ತನೆಯಲ್ಲಿ |
ಹರುಷಗುಡಿಗಟ್ಟಿ ತನು ಮರದು ನಿಂದು |
ಬರುವ ಪ್ರೇಮಾಂಜಲಿಯ |
ಭರಿತಲೋಚನನಾಗಿ |
ತರಿಸಿ ತಾರಿಸುವ ಘನಕರುಣವಂತರಿಗೆ 4
ಇಂತು ದುರ್ಗಮವಿರಲು |
ಸಂತರಾವು ನೀವೆಂದು |
ಸಿಂತರವ ಹೋಗಿ ಜನ ಸಿಂತರಿಸುವಾ |
ಭ್ರಾಂತ ಮೆಚ್ಚುವನಲ್ಲಾ |
ಶಾತಗುರು ಮಹಿಪತಿ ಸ್ವಂತನುಜಗೆಂದಾ 5