ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ಮರೆಯುವರೆ ಮರೆಯುವರೆ ರಾಮರಾಯಾ | ಗುರುಗಳಾರಾಧನೆಗೆ | ಶಿರಿವಾರದೊಡೆಯಾ || ಪರಿವಾರ ಸಹಿತಾಗಿ ತೆರಳುವದು ನಿಶ್ಚಯಿಸಿ ಬರೆವದಕೆ ಕಾಗದವು ಸಿಗದ್ಹೋಯಿತೆ | ಭರದಿ ಬರಬೇಕೆಂದು | ಕರೆಕಳುಹದಕೆನ್ನ | ಚರನೋರ್ವ ನಾದರು ದೊರೆಯದಾದನೆ ಅಕಟ 1 ಕ್ರೋಧ ವಿರಹಿತರಾದ ಸಾಧುವರ್ಯರ ಸಮಾರಾಧ | ನೆಗೆ ನಾ ಭಾರವಾದೆನೇನೈ | ಆದರವು ತಗ್ಗಿತೇ | ಯುಗ್ಮಪಾದಪಶುವಾದಿನೇ 2 ಗುರುಕರುಣವೆಗ್ಗಳದ ಗರುವಿಕೆಯೋ ಕಾರ್ಪರ ನರಸಿಂಹರರ್ಚಕರಮೋಕ್ಷ ಬಲವೋ ಪರಮ ಸತ್ಪುರುಷರುಪದೇಶ ಶ್ರವಣದ ಮದವೋ | ಹರಿಕಥಾ ಪಾನದ ಹಂಕಾರವೋ 3 ಇರಬೇಕು ಸರ್ವದಾ ಸಕಲರಲಿ ಸಮದೃಷ್ಟಿ ಹಿರಿಯರಾದವರಲ್ಲಿ ಏಕನಿಷ್ಟಿ | ನಿರುತದಲ್ಲಿ ಸದ್ಗೋಷ್ಟಿ ಪರನಾಗಿ ಮನಮುಟ್ಟಿ ಹರಿಪಾದಸ್ಮರಿಪರಿಗೆ ಕೈವಲ್ಯಷಟ್ಟಿ 4 ಶ್ರೀ ಶಾಮಸುಂದರನ ದಾಸಕೂಟಸ್ಥರೊಳು ನಾ ಸಲ್ಲದವನೆಂದು ಧೃಡವಾಯಿತೇ | ಭೂಸುರವೇಷದಲಿ ಎಂದು ಉದಾಸೀನ ಮಾಡಿನ್ನು 5
--------------
ಶಾಮಸುಂದರ ವಿಠಲ