ಇದರೊಳಾರೈಯ್ಯ ನೀನು ಆತ್ಮಾ
ವದಗಿ ನಾನೆಂದ ಹಂಕರಿಸಿ ಓಯಂದೆಂಬೆ ಪ
ನೋಡುವವನೊಬ್ಬ ತಾ ಕೇಳಲರಿಯನು ನುಡಿಯ
ನೋಡಲರಿಯನು ಕೇಳುವವ ರೂಪವಾ
ಆಡುವವ ನುಡಿಯೊಬ್ಬ ಪರಿಮಳಂಗಳ ತಿಳಿಯಾ
ಅಡಲರುವಿಲ್ಲ ಘ್ರಾಣೇಂದ್ರಿಯವನೆ 1
ಕೊಡುವವಗೆ ನುಡಿಯಿಲ್ಲ ನಡೆವವಗೆ ಕರವಿಲ್ಲಾ
ಬಿಡದೆ ಚೇಷ್ಟಿಸುವವಗ ರೂಪವಿಲ್ಲಾ
ಒಡನಾರು ಮೂರು ಇಪ್ಪತ್ತೈದು ಕೂಟದಲಿ
ಗಡಣದಿಂದಿಹ ಮನೆಗೆ ಕ್ಷೇತ್ರಜ್ಞನೊಬ್ಬನಿಹ 2
ತನ್ನ ನಿಜ ತಾನರಿಯ ಧನ್ಯ ತಾನೆಂತೆಂಬೊ
ನಿನ್ನ ಬಲ್ಲವಿಕಿಗಿದು ನೋಡುಚಿತವೆ
ಇನ್ಯಾರೆ ತಂದೆ ಮಹಿಪತಿ ಬೋಧವನು ಸವಿದು
ಕಣ್ಣದರೆದಚ್ಯುತನ ನೆನೆದು ತಿಳಿಯೋ 3