ಸೋತುಹೋದೆ ನಾನು ಶ್ರೀಹರಿ
ಸೋತುಹೋದೆ ನಾನು ಪ
ಪತಿತ ಪಾವನ ಮೂರ್ತಿಯ ಪ್ರೀತಿಯ
ಸತತ ಪಡೆಯಲು ಕೆಲಸವ ಮಾಡಿ ಅ.ಪ.
ನಿತ್ಯದಿ ಭಜಿಸುತ ಹರಿನಾಮವನು
ಸತ್ಯಧರ್ಮದಿ ನಡೆಯುತಲೀ
ಭ್ಯತ್ಯರಂದದಿ ಸೇವೆಯ ಮಾಡುತ
ನಿತ್ಯನೆನಾ ಧನ್ಯಾತ್ಮನಾಗದೆ 1
ಪರಮಾತ್ಮನ ಕೀರ್ತನೆಯನು ಮಾಡುತ
ಹರುಷದಿ ದಾಸನಾಗುತಲೀ
ಹರಿಯ ಸಾಸಿರ ನಾಮವ ಸ್ಮರಿಸುತ
ಶರಣಾಗತ ಪರಿಪಾಲನ ನೋಡಿದೆ 2
ಹೊನ್ನು ಹÉಣ್ಣು ಮಣ್ಣಿಗೋಸುಗ
ಜನ್ಮವ ಮೋಹದಿ ನವಿಸದಲೇ
ಚಿನ್ಮಯ ರೂಪನ ಪೂಜೆಯ ಮಾಡುತ
ಚನ್ನಕೇಶವ ಪಾದವ ಸೇರದೆ 3