ಕೋನೇರಿ ವಾಸ ವಿಠಲ | ನೀನೆ ಪೊರೆ ಇವನ ಪ
ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿ ಹರಿಯೆ0ಜ್ಞಾನಗಮ್ಯನೆ ಸಲಹೊ | ಮಾಣದಲೆ ಇವನಾ ಅ.ಪ.
ಸುಕೃತ | ರಾಶಿ ಫಲಿಸಿತೊ ಇವಗೆ ದಾಸ ದೀಕ್ಷೆಯಲಿ ಬಹು | ಆಶೆ ತೋರುವನೋವಾಸವಾನುಜ ನಿನ್ನ | ದಾಸತ್ವ ಪಾಲಿಸುತಪೊಷಿಸೂವುದು ಬಿಡವೆ | ಶೇಷಾದ್ರಿವಾಸಾ 1
ತೈಜಸನು ಗುರುವಾದಿ | ರಾಜಾಖ್ಯ ರೂಪದಲಿಮಾಜದಲೆ ಪೇಳ್ವ ವಿ | ಭ್ರಾಜದಂಕಿತವಾವಾಜರೂಪಯು ಹರಿಯೇ | ಯೋಜಿಸಿಹೆ ಇವಗೆನಿವ್ರ್ಯಾಜ ಕರುಣಿಯೆ ಪೂರ್ಣ | ತೇಜೌಜ ನಿಧಿಯೇ 2
ಮಧ್ವ ಸಮಯದ ಜ್ಞಾನ | ವೃದ್ಧಿ ಗೈಸಿವನಲ್ಲಿಅದ್ವೈತ ತ್ರಯದರಿವು | ಬುದ್ಧಿಗೇ ನಿಲುಕೀಅಧ್ವಯನು ಹರಿಯೆಂಬ | ಸಿದ್ಧಾಂತ ಮನಸಿನಲಿಬದ್ಧವಾಗುವ ತೆರದಿ | ಸಿದ್ಧಿಸೋ ಹರಿಯೇ 3
ಕಂಸಾರಿ ತವನಾಮ | ಶಂಸನ ಪ್ಲವದಿಂದಸಂಸಾರ ನಿಧಿ ತರಣ | ಸಂಶಯವು ರಹಿತಾಅಂಶ ಅವತಾರ ಆ | ವೇಶ ವಿಷಯಗಳ ನಿಸ್ಸಂಶಯದಿ ತಿಳಿಸಿ ಪದ | ಪಾಂಸು ಸೇವೆ ಈಯೋ 4
ಸರ್ವಜ್ಞ ಸರ್ವೇಶ ಸರ್ವಮೂಲನೆ ದೇವದುರ್ವಿಭಾವ್ಯದೆ ಹರಿಯೆ | ಶರ್ವವಂದ್ಯಾಸರ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5