ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ಬೆಳಗಾಯಿತೋ ಎನ್ನಯ ಸೇವಾ ಪ ಸ್ವೀಕರಿಸೋ ಮಹಾನುಭಾವ ದೇವ ಅ.ಪ ಮಧುರ ಗಾನವೇ ಗಂಗಾಸ್ನಾನ ಹೃದಯ ಶುದ್ಧಿಯೇ ಬದರಿಸ್ನಾನ ಬದಿಯಲಿರುವ ಭಕುತರ ಸಹವಾಸವೇ ನದಿನದಗಳವಗಾಹನ ಸ್ನಾನವೋ 1 ಹಾಲಿಗೆ ಕರದಲಿ ಥಾಲಿಯ ಪಿಡಿದು ಕೋಲಾಹಲ ಕಲಭಾಷಣ ಮಾಡುವ ಬಾಲರ ನಗುಮೊಗ ನೋಡಲು ಕೃಷ್ಣನ ಲೀಲೆಯ ಸಂದರ್ಶನಾನಂದವೋ 2 ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಕುಸುಮ ರಾಶಿಯ ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ 3 ತಾತನೆಂದು ಮೊರೆಯಿಡುವರು ನೀ ಅನ್ನ ದಾತನೆಂದು ಮೊರೆಯುತಿಹರೋ ತಾತನ ಕಿವಿಗೀ ಮಾತನು ತಿಳಿಸಲು ದೂತನು ನಾ ಕಾದಿಹೆನೊ ಪ್ರಸನ್ನನೇ 4
--------------
ವಿದ್ಯಾಪ್ರಸನ್ನತೀರ್ಥರು
ಲಕ್ಷ್ಮೀ ನಾರಾಯಣ ವಿಠಲ | ಪೊರೆಯ ಬೇಕಿವಳಾ ಪ ವಾಹನ ದೇವ | ಲಕ್ಷುಮಿಯ ರಮಣಾ ಅ.ಪ. ಸೃಷ್ಟಿ ಸ್ಥಿತಿ ಸಂಹಾರ | ಅಷ್ಟಕ್ಕು ಕಾರಣನೆಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೇ |ಶಿಷ್ಟ ಸದಾಚಾರ | ನಿಷ್ಠೆಯಲಿ ಗೈಯ್ಯುವಳುಶಿಷ್ಟೇಷ್ಟ ಹರಿಯೆ ಸದ | ಭೀಷ್ಟಗಳಗರೆಯೋ 1 ವಿೂಸಲೆಂದೆನಿಸಿರುವ | ದಾಸತ್ವದಾಕಾಂಕ್ಷೆಸಾಸಿರಕ್ಕೋರ್ವರಿಗೆ | ಲೇಸು ಪುಟ್ಟವುದೋಈ ಸಮಯದಲ್ಲೀಕೆ | ಆಶಿಸುತ್ತಿಹಳಯ್ಯಕೇಶವನೆ ಒಲಿದಿವಳ | ದಾಸ್ಯ ಸ್ವೀಕರಿಸೋ 2 ಶುದ್ಧ ತರತಮ ಜ್ಞಾನ | ಮಧ್ವೇಶನಲಿ ಭಕುತಿಇದ್ವದಕೆ ತೃಪ್ತಿಯಿಂ | ಬದ್ಧ ವೈರಾಗ್ಯಾಸಿದ್ಧಿಸುತ ಸಾಧನದಿ | ಬದ್ಧ ಕಂಕಣಳೆನಿಸೊಅದ್ವಿತೀಯನೆ ಹರಿಯೆ | ಮಧ್ವಾಂತರಾತ್ಮಾ 3 ಮುಪ್ಪುರದ ವೈರಿನುತ | ಸರ್ಪಶಯನನೆ ದೇವಾಸ್ವಪ್ನ ಸೂಚನೆಯಂತೆ | ಗೋಪ್ಯದಂಕಿತವಾಸುಪ್ತೀಶ ಇತ್ತಿಹೆನೊ | ಒಪ್ಪಿ ಕೈಪಿಡಿ ಇವಳಗುಪ್ತ ಮಹಿಮನೆ ದೇವ | ಆಪ್ರಕಟ ಹರಿಯೇ 4 ಶರ್ವಾದಿ ದಿವಿಜೇಡ್ಯ ಶಾರ್ವರೀಕರ ಪಾಲದುರ್ವಾದಿ ತಿಮಿರಕ್ಕೆ ಮಾರ್ತಾಂಡ ರೂಪೀದರ್ವಿ ಜೀವಿಯ ಕಾವ | ನಿರ್ವಹಣೆ ನಿನ್ನದೋಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು