ಏಳು ಏಳು ಕೇಶವಾ ಶ್ರೀಮಾಧವಾ
ಏಳು ಏಳು ಕೇಶವಾ ಪ
ಏಳಯ್ಯ ಮಧುಸೂದನ ಚಕ್ರಧಾರೀ
ಏಳಯ್ಯ ನಿಜಶೌರಿ ದಶರೂಪಧಾರೀ
ಏಳಯ್ಯ ದೇವಕಿಕಂದ ಉದಾರೀ
ಏಳಯ್ಯ ಮುರಹರ ಕೌಸ್ತುಭಧಾರೀ1
ತ್ರಿಜಗವನ್ನು ಬೇಗ ಪಾಲಿಸಲೇಳು
ಭಜಕರ ಕರುಣದಿ ರಕ್ಷಿಸಲÉೀಳÀು
ಸುಜನರ ಮರೆಯದೆ ವರದೆತ್ತಲಿಕೆ ಯೇಳು
ಕುಜನರ ಹರುಷದಿ ತರಿಯಲೇಳು 2
ದಾಸದಾಸರು ಬಂದು ಸೇವಿಸುತಿಹರೇಳು
ತಾಸು ತಾಸಿಗೆ ತತ್ವವರುಹಲೇಳು
ದಾಸಗೆ ನಿತ್ಯದಿ ಭಾಸವಾಗಲೇಳು
ದಾಸಗೆ ಮುಕ್ತಿಯ ಪಾಲಿಸಲೇಳು 3
ಅರುಣೋದಯವಾಯ್ತು ಕಿರುಣೋದಯವಾಯ್ತು
ಭರದಿಂದ ಸೂರ್ಯನು ಮೇಲೇರುತಿಹನು
ಚರಣ ಕಿಂಕರರೆಲ್ಲ ಸಂಸಾರ ಶರಧಿಯ
ಸರಸದಿ ದಾಂಟಿ ನಿಂನನು ಸೇರುತಿಹರು 4
ವಿದ್ಯೆಯರುಹಲು ಯೇಳು ಜ್ಞಾನವೀಯಲು ಯೇಳು
ಬುದ್ದಿಯ ಕಲಿಸಿ ಆತ್ಮವ ಸೇರಲೇಳು
ಮದ್ದು ಭವರೋಗಕ್ಕೆ ಬೇಗನೀಯಲು ಯೇಳು
ಎದ್ದು ಲೋಕಕ್ಕೆ ನೀ ಬೆಳಗಲೇಳು 5
ಸನ್ನುತ ವರ ದೂರ್ವಾಪುರಕೆ ದಿಗ್ದೇಶದಿಂ
ದೀನದಾಸರು ಬಂದು ಘನಭಕ್ತಿಯಿಂದ
ನಿತ್ಯ ಮಾಡುವರಯ್ಯ
ಚನ್ನಕೇಶವಾ ಸೇವೆ ಸ್ವೀಕರಿಸೇಳು 6