ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮನೆಬಾಗಿಲ ಮೇಲೆ ಶ್ರೀನಿವಾಸ ಮೂರ್ತಿ) ಮಾಧವ ನಿಧಿಗಿರಿನಾಯಕ ಪದಕಮಲಾಶ್ರಿತ ಪರುಷಸುಖದಾಯಕ ಪ. ಬಲಿಯ ದೃಢಕೆ ಮೆಚ್ಚಿ ಬಾಗಿಲ ಕಾಯ್ದನಿ- ರ್ಮಲ ಕರುಣಾಮೃತ ವಾರಿಧೆ ಸುಲಭದಿ ಮುಂದಿನ ವಲಭಿತ್ಪದವನು ಸಲಿಸುತ ನೀನೀ ನಿಲಯದಿ ಸೇರಿದಿ 1 ಮಾಕಳತ್ರ ಮಮತಾನರಮೋಹ ನಿ- ರಾಕರಿಸಖಿಳ ಸುಖಾಕರನೆ ಸ್ವೀಕರಿಸೆನ್ನಯ ಸರ್ವ ಸಮರ್ಪಣ ಬೇಕು ಸರ್ವದಾ ತ್ವಜನ ತರ್ಪಣ 2 ಭೂರಮೇಶ ಗೃಹದ್ವಾರದಿ ನೀ ನೆಲೆ- ದೋರಲು ದುರಿತವು ಸೇರದಲೆ ದೂರೋಡುವದೆಂದರಿತು ನಂಬಿದೆನು ನೀರಜಾರಮಣ ಶೇಷ ಗಿರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಲಾವಣಿ ಧಾಟಿ) ಕರುಣಾಳು ಕರುಣಾಳು ನಾನಿನಗೆ ಶರಣ್ಯನಾಗಿರೆ ದುರಿತದ ಭಯವ್ಯಾಕೆ ಬಲು ಜೋಕೆ ಪ. ಬಲು ಜೋಕೆಯಿಂದ ನೀ ಸ್ವೀಕರಿಸೆನ್ನ ದ- ಯಾಕರ ತ್ವರೆಯಿಂದ ಸುರವಂದ್ಯ 1 ಪಾದ ಮನ್ಮಂದಿರದ ಲಾ- ನಂದ ಬೀಜಬಿತ್ತು ಫಲವಿತ್ತು 2 ಫಲವಿತ್ತು ಸಲಹು ಪುರುಷೋತ್ತಮ ಸುಲಲಿತ ವರ್ತುಳ ಶುಭನಾಭ ಕರಶೋಭ 3 ಚಕ್ರಧರ ವಾರಿತದಾನವ ವೀರ ವಿದ್ಯಾಧೀರ ಜಲಧಾರಾ 4 ಜಲಧಾರಾಕರ ನಿಭ ಭೂರಮೇಶ ದು- ರ್ವಾರ ದುರಿತನಾಶ ಸರ್ಪೇಶ 5 ಸರ್ಪೇಶ ಗಿರೀಂದ್ರ ಸಮರ್ಪಿತ ವಿಗ್ರಹ ನಿತ್ಯದಿ ಕಾಪಾಡೊ ದಯಮಾಡು 6 ದಯಮಾಡು ದುರ್ಮತಿಯ ದೂಡು ಕಟಾಕ್ಷದಿ ನೋಡುತ ನಲಿದಾಡು 7
--------------
ತುಪಾಕಿ ವೆಂಕಟರಮಣಾಚಾರ್ಯ
ಗೋವಿಂದಾಷ್ಟೋತ್ತರ ನಾಮಾವಳಿ ಹೃದ್ಗತ ತಮನಾಶ ಗೋವಿಂದ | ಎನ್ನಹೃದ್ಗುಹದೊಳು ತೋರೋ ಗೋವಿಂದ ಪ ಅಲವ ಮಹಿಮ ಹರಿ ಗೋವಿಂದ | ನಮ್ಮಅಲವ ಭೋದರ ಪ್ರೀಯ ಗೋವಿಂದ ||ಆಲಯದೊಳು ನಿಲ್ಲೊ ಗೋವಿಂದ | ಹೃ-ದಾಲಯದಲಿ ತೋರೊ ಗೋವಿಂದ 1 ಇಕ್ಷುಚಾಪನ ಪಿತನೆ ಗೋವಿಂದ | ನೀನಿಕ್ಷುಧನ್ವಾರಿ ನುತ ಗೋವಿಂದ ||ಈಕ್ಷಿಸೋ ಕರುಣದಿ ಗೋವಿಂದ | ನಿ-ನ್ನೀಕ್ಷಿಸ ಲೋಶವೇನೊ ಗೋವಿಂದ 2 ಉರಗ ಶಯನನೆ ಗೋವಿಂದ | ನಮ್ಮಉರಗಾಯಿ ವೈಕುಂಠ ಗೋವಿಂದ ||ಊರೂರು ಚರಿಸಿದೆ ಗೋವಿಂದ | ನಿ-ಮ್ಮೂರಿಗೆ ಕರೆದೊಯ್ಯೊ ಗೋವಿಂದ 3 ಋಗಾದಿ ತ್ರಯಿಮಯಿ ಗೋವಿಂದ | ಹರಿಋಗ್ವಿನುತನೆ ಗುರು ಗೋವಿಂದ ||Iೂಕ್ಷ ಸದ್ವಿನುತನೆ ಗೋವಿಂದ | ಹರಿIೂಕಾರ ಪ್ರತಿಪಾದ್ಯ ಗೋವಿಂದ 4 ಏತತ್ತೆನಿಸಿಯು ಹೃದ್ಗ ಗೋವಿಂದ | ನೀ ನೇತಕೆ ಕಾಣಿಯಾಗಿಹೆ ಗೋವಿಂದ ||ಐತದಾತ್ಮ್ಯಕ ಸರ್ವ ಗೋವಿಂದ | ನೀನೈತರುವುದು ಮನಕೆ ಗೋವಿಂದ 5 ಸತಿ ಗೋವಿಂದ | ನೀನೌತು ಕೊಂಡಿಹದೇಕೊ ಗೋವಿಂದ 6 ಅಂಗಾಂಗಿ ಭಾವದಿ ಗೋವಿಂದ | ನೀನಂಗಾಂಗದಿ ಕ್ರೀಡಿಪೆ ಗೋವಿಂದ ||ಅಹರರ್ಹಮನದಲಿ ಗೋವಿಂದ | ನೀಅಹರಹರ್ವಿಹರಿಸೋ ಗೋವಿಂದ 7 ಕಪಿಲಾತ್ಮ ಶ್ರೀ ಹರಿ ಗೋವಿಂದ | ನಮ್ಮಕಪಿವರ ಪೂಜ್ಯನೆ ಗೋವಿಂದ ||ಖಪತಿಗಮನ ಗುರು ಗೋವಿಂದ | ಜಗಖರ್ಪರ ಸೀಳಿದ ಗೋವಿಂದ 8 ಗರುಡಧ್ವಜನೆ ಬಾರೋ ಗೋವಿಂದ | ಜಗಂಗರುವವ ಕಳೆಯೊ ಗೋವಿಂದ ||ಘರ್ಮಾಸ ಸಮಂತಾತು ಗೋವಿಂದ | ಸೂಕ್ತಘರ್ಮಕ್ಕೆ ವಿಷಯನೆ ಗೋವಿಂದ 9 ಓಂಕಾರ ಪ್ರತಿಪಾದ್ಯ ಗೋವಿಂದ | ಪಾ-ಙ್ತವು ಜಗವೆಲ್ಲ ಗೋವಿಂದ ||ಚರ್ಮದೊಳುದ್ಗೀಥ ಗೋವಿಂದ | ಇದ್ದುಚರ್ಮ ಲಾವಣ್ಯದ ಗೋವಿಂದ 10 ಛಂದಸ್ಸಿನಿಂಛನ್ನ ಗೋವಿಂದ | ನಾಗಿಛಂದೋಭಿಧನೆನಿಪೆ ಗೋವಿಂದ ||ಜಂಗಮ ಚರವ್ಯಾಪ್ತ ಗೋವಿಂದ | ಎಮ್ಮಜಂಗುಳಿಗಳ ಕಳೆಯೊ ಗೋವಿಂದ 11 ಝಷ ರೂಪಿ ಕಮಠನೆ ಗೋವಿಂದ | ನಮ್ಮಝಷ ಕೇತುಪಿತ ಕಾಯೊ ಗೋವಿಂದ ||ಜ್ಞಾನ ಜ್ಞೇಯ ಜ್ಞಾತೃ ಗೋವಿಂದ | ಪ್ರ-ಜ್ಞಾನ ಘನನೆನಿಪೆ ಗೋವಿಂದ 12 ಟಂಕಿ ಎಂಬುವನೆ ಗೋವಿಂದ | ನಮ್ಮಾಟಂಕವ ಕಳೆಯೋ ಗೋವಿಂದ ||ಠಕ್ಕು ಠವಳಿಗಾರ ಗೋವಿಂದ | ನಮ್ಮಠಕ್ಕಸಿ ಹಾಕದಿರು ಗೋವಿಂದ 13 ಡರಕೊ ಡರ್ಯಾಭಿಧ ಗೋವಿಂದ | ನಮ್ಮೆಡರನು ಪರಿಹರಿಸೊ ಗೋವಿಂದ ||ಢಣ ಢಣ ನಾದದಿ ಗೋವಿಂದ | ಬಲುಢಣಿರೆಂಬೊ ವಾದ್ಯದಿ ಗೋವಿಂದ 14 ಣನಾಮ ವಾಚ್ಯನೆ ಗೋವಿಂದ | ಪ್ರ-ಣಮನ ಮಾಡುವೆನೋ ಗೋವಿಂದ ||ತರುಣಾರ್ಕ ಪ್ರಭೆಯ ಗೋವಿಂದ | ನಮ್ಮತರುಣಿ ದ್ರೌಪದಿ ವರದ ಗೋವಿಂದ 15 ಥರಥರವರ್ಣನೆ ಗೋವಿಂದ | ಬಲ್ಪ್ರಮಥನ ಶೀಲನೆ ಗುರು ಗೋವಿಂದ ||ದರ ಕಂಬುಧರನೆ ಗೋವಿಂದ | ತ್ರಿ-ದಶರ ಪರಿಪಾಲ ಗೋವಿಂದ 16 ಧರ್ಮಸು ಗೋಪ್ತನೆ ಗೋವಿಂದ | ಸ-ಧ್ದರ್ಮ ನಾಮಕ ಗುರು ಗೋವಿಂದ ||ನರೆಯಣಾಭಿಧ ಗುರು ಗೋವಿಂದ | ನಮ್ಮನರಸಖನೆನಿಸಿಹೆ ಗೋವಿಂದ 17 ಪರಮ ಪುರುಷ ಗುರು ಗೋವಿಂದ | ಕಾಯೊಪರಮಾನಂದ ಪ್ರದನೆ ಗೋವಿಂದ ||ಫಲರೂಪನು ನೀನೆ ಗೋವಿಂದ | ಇದೆಫಲಿತಾರ್ಥವೊ ಗುರು ಗೋವಿಂದ 18 ಬಗೆ ಬಗೆ ಕರ್ಮಗಳ್ ಗೋವಿಂದ | ಮಾಡಿಬಗೆ ಬಗೆ ಲೀಲನೆ ಗೋವಿಂದ ||ಭರ್ಗ ರೂಪಿಯೆ ಗುರು ಗೋವಿಂದ | ನಮ್ಮಭರ್ಮ ಗರ್ಭನ ಪಿತ ಗೋವಿಂದ 19 ಮದಜನಕಮಜ್ಜದಿ ಗೋವಿಂದ | ನಮ್ಮಮದನ ಗೋಪಾಲನೆ ಗೋವಿಂದ ||ಯಜ್ಞ ಭುಗ್ಯಜ್ಞನೆ ಗೋವಿಂದ | ಮತ್ತೆಯಜ್ಞ ಸಾಧನ ನೀನೇ ಗೋವಿಂದ 20 ರಣದೊಳರ್ಜುನ ಪಾಲ ಗೋವಿಂದ | ಹಗರಣವನೆ ಕಳೆಯೊ ಗೋವಿಂದ ||ಲವಕುಶ ಪಿತನೆನಿಪೆ ಗೋವಿಂದ | ನೀನಲವಪೂರ್ಣ ಮಹಿಮ ಗೋವಿಂದ 21 ವರ್ಣಗಳ್ಧ್ವನಿಗಳು ಗೋವಿಂದ | ಸರ್ವವರ್ಣಿಪುದು ನಿನ್ನ ಗೋವಿಂದ ||ಶರೊ ಆಭಿಧ ಜೀವನ್ನ ಗೋವಿಂದ | ಮೀಟಿಶರೀರಾಖ್ಯನೆನಿಸುವೆ ಗೋವಿಂದ 22 ಷಡ್ಗುಣ ಪರಿಪೂರ್ಣ ಗೋವಿಂದ | ನೀನೆಷಡ್ವಾದಿ ಸ್ವರ ವ್ಯಾಪಿ ಗೋವಿಂದ ||ಸತ್ತಾದಿ ಪ್ರದ ರೂಪಿ ಗೋವಿಂದ | ನೀನೆಸತ್ತತ್ವ ಪ್ರತಿಪಾದ್ಯ ಗೋವಿಂದ 23 ಹರಿ ಹರಿ ಎಂದರೆ ಗೋವಿಂದ | ಪಾಪಹರಿ ಸೂವಿ ನೀನೇ ಗೋವಿಂದ ||ಳಾಳೂಕ ಆಭಿಧ ಗೋವಿಂದ | ಕಾಯೊಳಕಾರ ಪ್ರತಿಪಾದ್ಯ ಗೋವಿಂದ 24 ಕ್ಷಮಿಸೆನ್ನ ಅಪರಾಧ ಗೋವಿಂದ | ಬಲಿಕ್ಷಮೆಯನಳೆದ ಗುರು ಗೋವಿಂದ ||ಕ್ಷಮಕ್ಷಾಮಾಭಿಧ ಗುರು ಗೋವಿಂದ | ನೀಲಕ್ಷುಮಿ ಸಹ ನೆಲಸೊ ಗೋವಿಂದ 25 ಜ್ಞಾನಗಮ್ಯನೆ ಗುರು ಗೋವಿಂದ | ತತ್ವಜ್ಞಾನವ ಪಾಲಿಸೋ ಗೋವಿಂದ ||ಜ್ಞಾನಿಗೆ ಪ್ರಿಯತಮ ಗೋವಿಂದ | ನಿನಗೆಜ್ಞಾನಿ ಜನರು ಪ್ರಿಯರು ಗೋವಿಂದ 26 ಏಕ ಪಂಚಾಶತು ಗೋವಿಂದ | ವರ್ಣಏಕಾತ್ಮ ಮಾಲೇಯ ಗೋವಿಂದ ||ಲೋಕೈಕನಾಥ ಗುರು ಗೋವಿಂದ | ವಿಠಲಸ್ವೀಕರಿಸೆನ್ನ ಕಾಯೋ ಗೋವಿಂದ 27
--------------
ಗುರುಗೋವಿಂದವಿಠಲರು
ತಂದೆ ಮುದ್ದು ಮೋಹನ್ನಾ ನಿನ್ನಯದ್ವಂದ್ವ ಪಾದವ ತೋರಣ್ಣಾ ಪ ಕಂದನ ಕುಂದನು ಒಂದನು ಎಣಿಸದೆಬಂದು ನಿಲ್ಲೊ ಮನ ಮಂದಿರದೊಳು ನೀ ಅ.ಪ. ಪರಾಕು ಪೇಳುವೆ ಓಹೋ |ಸಾಕು ಮಾಡು ಈ ಭವದ ಸಂಗವನು |ಸ್ವೀಕರಿಸೆನ್ನ ಕೃಪಾಕರ ಮೂರುತಿ 1 ವಾಸವ ಗುರವೇ ಪೋಷಿಸು ಎನ್ನನು ಮೀಸಲೆನಿಸಿ ಮನ ಶ್ರೀ ಶನ ಪದದಲಿ 2 ಚಾರು ಚರಣವನು 3
--------------
ಗುರುಗೋವಿಂದವಿಠಲರು
ತುಳಸಿ ಸ್ವೀಕರಿಸೆನ್ನಯ ಪೂಜೆಯ ತುಳಸೀ ಲೋಕೋತ್ತರನರಸೀ ಪ ಈ ಕರಗಳು ಧನ್ಯಗಳಾಗಲಿ ಮನ ವ್ಯಾಕುಲ ಪರಿಹರಿಸಮ್ಮ ಜನನಿ ಅ.ಪ ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಫುಲ್ಲ ಕುಸುಮವಿರಲು ಒಲ್ಲನು ಹರಿ ನೀನಿಲ್ಲದ ಪೂಜೆಯ ಬಲ್ಲರಿದನು ಜ್ಞಾನಿಗಳು ಮಾತೆ 1 ವಂದಿಸಿ ನಿನ್ನಯ ಚರಣಗಳಿಗೆ ಫಲ ಗಂಧ ಪುಷ್ಪಗಳನರ್ಪಿಸುವೆ ಬೃಂದಾವನಲೋಲನ ವಲ್ಲಭೆ ಮೃದು ಮಂದಹಾಸವನು ತೋರೆ ಮಾತೆ 2 ನೀನಿದ್ದೆಡೆ ಹರಿ ತಾನಿರುವನು ಅನು ಮಾನವಿಲ್ಲವೆನಗೆ ನೀನಾಗಿರುವೆ ಪ್ರಸನ್ನವದನೆ 3
--------------
ವಿದ್ಯಾಪ್ರಸನ್ನತೀರ್ಥರು
ಪೊರೆಯದಿರುವರೇ _ ಶ್ರೀ ರಮಣಾ ಪ ದುರಿತಗಜಕೆ ನೀ ಪಂಚಾನನಾ ಅ.ಪ. ಸಿರಿಯ ಮದದಿ ನಾನರಿಯದೆ ಪೋದರೆ ಗರುಡಗಮನ ನೀ ಮರೆತುಬಿಡುವರೇ ಕರುಣಶರಧಿ ಸರಿ ಬಿರುದು ಪೊಳ್ಳಾಗದೇ ಚರಣಪಿಡಿವೆ ಪೊರೆ ಮರುತನೊಡೆಯ ಹರಿ1 ಪಾತಕಿ ಎಂಬುವ ನೀತಿಯನುಡಿದೊಡೆ ಪೂತರಮಾಡುವ ಖ್ಯಾತಿಯ ಬಿಡುವೆಯ ನಾಥನೆ ನಂಬಿದೆ ಕಾತರ ಪಡುತಿಹೆ ಪ್ರೀತಿಲಿ ಕಾಣಿಸು ಆರ್ತಿವಿದೂರ 2 ನಡಿಯುವ ಚರಣವು ಎಡುವುದು ಸಹಜವೆ ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3 ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ ಶರಣರ ಪೊರೆಯುವ ವರಗುಣ ಭೂಷಣ ಅರಿಯೆನುಪಾಯವ ಶರಣುಶರಣೈಯ ಪರಮಪುರುಷ ಭಗಸರಸದಿ ನಲಿನಲಿ 4 ಸಾಕುವ ಬಿಂಬನೆ ನೂಕಿದೆ ಯಾತಕೆ ಹಾಕುತ ಮಂಕನು ಏಕಾಯತನ ನಾಕರೊಡೆಯ ಭವನೂಕುತ ಬೇಗನೆ ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5
--------------
ಕೃಷ್ಣವಿಠಲದಾಸರು
ಶ್ರೀ ವಿಜಯದಾಸರ ಸ್ತೋತ್ರ ಪದಗಳು ಕಾಯೋ ಕಾಯೋ ಕಾಯೋ - ವರವೀಯೋ ಪ ಕಾಯೋ ಕಾಯೋ ವರವೀಯೋ ವಿಜಯ ಗುರುರಾಯ ನೀನಲ್ಲದುಪಾಯ ಮತ್ತಿಲ್ಲ ಅ.ಪ ತಾಪತ್ರಯ ಬಲುದ್ದೀಪನವಾಗಿದೆನೀ ಪರಿಪಾಲಿಸದೀಪರಿ ಥರವೇ 1 ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ 2 ಸ್ವೀಕರಿಸೆನ್ನ ನಿರಾಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ 3 ದುರಿತ 4 ಒಂದರಿತವನಲ್ಲ ಇಂದಿರೇಶನ ಪದದ್ವಂದ್ವವ ತೋರೋ ಹೇ ತಂದೆ ಕರುಣದಿ 5 ಮಾನವರೊಳಗೆಲ್ಲ ಈ ನರಮೂರ್ಖನುಏನು ಅರಿಯ ಬಲು ದೀನನಾಗಿಹನು 6 ಆಲಸ್ಯ ತಾಳದು ಪಾಲಿಸು ವೇಣು ಗೋ-ಪಾಲ ವಿಠಲನ ಆಳು ಕೃಪಾಳು 7
--------------
ವೇಣುಗೋಪಾಲದಾಸರು