ಒಟ್ಟು 8 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರಾಣವಿಷಯ ಶ್ರೀವೆಂಕಟೇಶ ಕಲ್ಯಾಣ ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ಸುರಮುನಿವಚನದಿ ಭೃಗುಮುನಿವರ ಪೋಗಿ ಹರುಷದಿ ಶ್ರೀಹರಿ ಉರಗಶಯನನಾಗಿ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವಂಥ ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ 1 ಸ್ವಾಮಿ ನೀನಿಜಧಾಮವನೇ ತೊರೆದೂ ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ ವಲ್ಮೀಕವನೆ ನೋಡಿ ಸನ್ಮುದವನ್ನೇ ತೋರುತ ಕಮಲ ಭವಶಿವ ತುರುಕರುರೂಪದಿ ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ ಭೂಮಿಗೊಡೆಯ ಚೋಳನೃಪಸೇವಕನು ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು ಅಮಿತ ಸುಗುಣಪೂರ್ಣ ಅಜರಾಮರಣ ನೀ ಮಸ್ತಕಸ್ಪೋಟನ ವ್ಯಾಜವ ತೋರಿ ಪ್ರೇಮದಿ ಗುರುಪೇಳ್ದೌಷಧಕಾಗಿ ನೀ ಮೋಹವ ತೋರಿದೆ ವಿಡಂಬನಮೂರ್ತೇ 2 ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ ಹಯದಿ ಕುಳಿತ ನಿನ್ನ ನೋಡಲು ಪ್ರಿಯಳಿವಳೆನಗೆಂದು ಯೋಚಿಸಿ ಕಾಯಜಪಿತ ನಿನ್ನ ಹಯವನೆ ಕಳಕೊಂಡು ಮಾಯದಿಂದ ನೀ ಮಲಗಿದೆ ತೋಯಜಮುಖಿಯಳ ಬೇಡಿದೇ ಆ ಯುವತಿಯನ್ನೇ ಸ್ಮರಿಸುತಾ ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು ಶ್ರೇಯವೆಂದು ಆಕಾಶನನೊಪ್ಪಿಸಿ ತಾಯಿಯಭೀಷ್ಟವನಿತ್ತೆ ಸ್ವರಮಣಾ 3 ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ ಭಕುತನಾದ ಆಕಾಶನೃಪತಿಯು ಬಕುಳೆ ಮಾ- ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ- ಗೆ ಕೊಟ್ಟನು ತಾ ಲಗ್ನಪತ್ರಿಕಾ ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ ಸಕಲಸಾಧನವಿಲ್ಲಿನ್ನು ಲೋಕೇಶಗರುಹಬೇಕಿನ್ನು ಲೋಕಪತಿಯೆ ಸುರಕೋಟಿಗಳಿಂದಲಿ ಈ ಕುವಲಯದಿ ನಿನ್ನಯ ಪರಿಣಯವೆಸಗಲು ಭಕುತಜನಪ್ರಿಯ ಶ್ರೀವತ್ಸಾಂಕಿತ 4 ಖಗವರವಾಹನ ದೇವಾ ಅಗಣಿತಮಹಿಮ ಗೋಮಯನೆನಿಸಿ ಸುರರ ಪೊರೆಯುತಾ ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ ಖಗಮೃಗ ರೂಪವ ಬಗೆಬಗೆ ಇಹೆ ಪೊಗಳಲಳವೇ ಗಿರಿವರವು ಹಗಲು ಇರುಳು ಭಗವಂತನೆ ನಿನ್ನನ್ನು ಪೊಗಳುತಿಹರು ನಿನ್ನ ಭಕುತರು ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ ಯುಗ ಯುಗದೊಳು ನೀನಗದೊಳು ನೆಲಸಿಹೆ ಜಗದ ದೇವ ರಾಜಿಸುವವನಾಗಿಹೆ ಮಿಗಿಲೆನಿಸಿದ ಶ್ರೀ ವೆಂಕಟೇಶಾ ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ 5
--------------
ಉರಗಾದ್ರಿವಾಸವಿಠಲದಾಸರು
ಅನಿಲ ಹೃತ್ಕುಮುದೇಂದು | ವೇದ ವ್ಯಾಸಾಎನಗಿನ್ನು ತವ ಧ್ಯಾನ | ಸುಖವೀಯೊ ಶ್ರೀಶಾ ಪ ಚಿದ ಚಿದ್ವಿಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ | ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ 1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯಎನಗರುಹು ವೇದಾರ್ಥ | ವೇದ ವೇದ್ಯಾ |ಘನ ಮಹಿಮಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮಾ 2 ಸಚ್ಛಾಸ್ತ್ರ ಕರ್ತೃಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವವರುಹೆ | ಬುಧ ಜನರಿಗೇ |ಮತ್ಸ್ಯಾದಿ ರೂಪ ನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಬೋಧಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಲಕ್ಷ್ಮೀ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಳಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ ಮಲ | ಗಲನುವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಬೋಧರ ಸುಸೇವೆಯನು | ಸ್ವೀಕರಿಸುವೇ |ಮೋದಗುಣ ಪೂರ್ಣ ಗುರು | ಗೋವಿಂದ ವಿಠಲನೇಹೇ ದಯಾಂಬುಧೇ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಓಂಕಾರಾ ಕಾರಾ ಶಿವನೇ | ಪಾಲಯ ಮಾಂ ಪ ವೈಕಾರಿಕಾದಿ ತ್ರ್ಯಾಕಾರ ಹರನೆಸ್ವೀಕರಿಸುವುದೀ ತೋಕನ ಬಿನ್ನಪ ಅ.ಪ. ನರ್ಮದೆ ಕಾವೇರೀ ಸಂಗಮಾ | ಶೈಲವಾಸಾ |ಹಮ್ರ್ಯ ದೊಳಗೆ ಇಹ | ಬೊಮ್ಮನಯ್ಯಾ ಪದಕಮ್ಮಲ ಕಾಂಬ ಸು | ಹಮ್ಮ ನೀಯೊ ಹರ 1 ವ್ರಾತ ತುತಿಸೆ ಬಲುಪ್ರೀತಿಲಿ ತ್ರಿಪುರಾ | ರಾತಿ ಎನಿಸಿದೇ 2 ಬದರೀಯಾ ವಾಸವಾ | ನಾರಾಯಣನಾ |ಪದದ ಉದಕ | ಅಭಿಷೇಚಿಸುವೆನುಮುದದಿ ಕೊಳ್ಳೊ ಗುರು | ಗೋವಿಂದ ಪೌತ್ರಾ 3
--------------
ಗುರುಗೋವಿಂದವಿಠಲರು
ಕೊಟ್ಟರೂ ಸರಿ ನೀನು ಕೊಡದಿದ್ದರೂ ಸರಿ ಕೆಟ್ಟ ಮನುಜರ ಕಾಲಕಟ್ಟರು ನಿನ್ನ ಭಕ್ತರು ನೀ ಕೊಟ್ಟುದೆ ಎಮಗಧಿಕವೆಂದು ತಿಳಿದು ನೀ ಕೊಟ್ಟಷ್ಟಕ್ಕೆ ಸಂತಸದಿ ಸ್ವೀಕರಿಸುವರು ಕಾಲ ಏಳು ಬೆಟ್ಟದೊಡೆಯ ವೆಂಕಟೇಶ
--------------
ಸರಸ್ವತಿ ಬಾಯಿ
ನೋಡಿದೇ ಶ್ರೀ ವಿಠಲನ ನೋಡಿದೆ ಪ ಕುಂಡಲ ಧರನ ಅ.ಪ. ದಾಸರಂದದಿ ಕಾವಿ ವಸನ | ಹೊದ್ದುಭಾಸೀಸುತಿಹ ಸಿರಿವರನ | ವಸನಮೀಸಲನವನು ತೆಗೆಯಲದನ | ಕಂಡೆಲೇಸಾದ ಶಾಲು ಹೊದ್ದವನ | ಆಹಕಾಶಮೀರದ ಶಾಲು | ಭಾಸುರ ಜರೆ ಖಚಿತಭೂಷಿತ ಹರಿ ಕುಳಿತು | ತೋಷಿಪ ಭಕುತರನ 1 ಸುತ್ತಿಹ ಪಾವಡೆ ಶಿರಕೇ | ಬಲುಸುತ್ತು ಸುತ್ತಿರುವುದು ಅದಕೆ | ಹರಿಮಸ್ತಕ ಛಂದ ಕಾಂಬುದಕೆ | ನೋಡಿಭಕ್ತ ಸಂದಣಿಯ ತೋಷಕ್ಕೆ | ಆಹಸುತ್ತಿಹುದನು ಬಿಚ್ಚೆ | ತುತ್ತಿಸುತಿರಲಾಗಕೃತ್ತಿವಾಸನ ತಾತ | ನೆತ್ತಿ ನೈಜವ ಕಂಡೆ 2 ಪೂಜಾರಿ ತೆಗೆಯಲು ಜರಿಯ | ಶಾಲುಮಾಜಾದೆ ವಿಠಲನ ಪರಿಯ | ಕಂಡೆನೈಜದ ಶ್ರೀವರನ ದ್ವಯ | ಹಸ್ತಯೋಚಿಸಿ ಕಟಿಲಿಹ ಪರಿಯ | ಆಹಸೋಜಿಗತನರೂಪ | ನೈಜದಿ ತೋರುತಪೂಜಾದಿ ಸ್ವೀಕಾರ | ವ್ಯಾಜಾವ ಕಂಡೆನು 3 ನಿರ್ಮಲಾಕೃತಿ ಪೊದ್ದ ಹಾರ | ತುಳಸಿಕಮ್ಮಲ ರ್ಸೂಸುವಧಾರಾ | ಕಾರಒಮ್ಮೇಲಿ ತೆಗೆದರಪಾರ | ದಯಸುಮ್ಮನ ಸರಿಗೀವ ಪೋರ | ಆಹಆಮ್ಮಹ ದೈವನ | ಇಮ್ಮಡಿ ಪ್ರಭೆ ಕಂಡನಿರ್ಮಾಲ್ಯ ತೆಗೆಯುವ | ಕರ್ಮಾಚರಿಸೂವಲ್ಲಿ 4 ಪಾದ | ಸ್ವೀಕರಿಸುವ ಭಕ್ತತೋಕನ ಬಿಂಬೋದ | ಶ್ರೀಕರ ದಳ ತುಳಸಿ 5 ನಾಕ್ಹತ್ತು ಭುವನಗಳ್ಜೋತಿ | ಮತ್ತನೇಕಾನೇಕಾಕಾರ ಜ್ಯೋತಿ | ಗಳೊಪ್ರಕಾಶ ಪ್ರದ ಪರಂಜ್ಯೋತಿ | ಮುಕ್ತಿಪ್ರಕಾರ ದೊಳಗಿವನೆ ಜ್ಯೋತಿ | ಆಹಏಕಮೇವ ಹರಿಗೆ | ಕಾಕಡಾರುತಿ ಮಾಳ್ಪಲೋಕರ ಪೂಜೆಯ | ಸ್ವೀಕರಿಪುದ ಕಂಡೆ 6 ಪಂಚ ಮೋಕ್ಷ ಪ್ರದ ಹರಿಗೆ | ಆಯ್ತುಪಂಚ ವಿಧಭಿಷೇಕ ಆವಗೆ | ಶೇಷಮಂಚಿಕೆ ಕ್ಷೀರಾಬ್ದಿಶಯಗೆ | ಮಧುಸಂಚನ ಮಧ್ವಿದ್ಯ ಹರಿಗೆ | ಆಹಪಂಚಾಮೃತಭಿಷೇಕ | ಸಂಚಿಂತಿಸುವನೀಗೆಸಂಚಿತ ಕರ್ಮವ | ಕೊಂಚವ ಮಾಡುವ 7 ಮಂಗಳ ಮಹಿಮಗ ಸ್ನಾನಾ | ಅವಗಂಗಾ ಪಿತನೆಂಬುದೆ ಮಾನ | ಹಾಗೂಅಂಗಜನಯ್ಯಗೆ ಸ್ನಾನಾ | ಆಯ್ತುಹಿಂಗದೆ ಲೋಕ ವಿಧಾನಾ | ಆಹಸಂಗೀತಲೋಲ ಸ | ತ್ಸಂಗವು ತುತಿಸಲುಸ್ವಾಂಗಾಯನಾಮ ಶು | ಭಾಂಗನು ಮೆರೆದನು 8 ಕಾಯ ವರೆಸಿ | ಬಹುಶಾಸ್ತ್ರೋಕ್ತಿ ಉಡಿಗೆಯ ಉಡಿಸಿ | ಮತ್ತೆರತ್ನಧ್ಯಾಭರಣವ ತೊಡಿಸಿ | ಚೆಲ್ವಕಸ್ತೂರಿ ತಿಲಕವನಿರಿಸಿ | ಆಹವಿಸ್ತøತೀಪರಿಯಲಿ | ಸತ್ಯ ಷೋಡಶ ಪೂಜೆಚತ್ತುರ ಮೊಗನಿಂದ | ಕೃತ್ಯಾನು ಸಂಧಾನ 9 ವೇದ ಘೋಷ ಪೂಜಾ ಮಂತ್ರ | ಬಹುನಾದ ವಿಠಲ ನಾಮ ಮಂತ್ರ | ತುಂಬಿಮೋದ ಪೂರೈಸಿತು ತಂತ್ರ | ಘಂಟೆನಾದದಿಂದಾರುತಿ ಕೃತ | ಆಹಆದರದಿಂದ ಪ್ರ | ಸಾದವು ಸ್ವೀಕೃತಮೋದದಿ ವಿಠಲನ | ಪಾದಾಲಿಂಗಾಂತ್ಯವ 10 ಉತ್ಕøಷ್ಟ ಸುಕೃತದ ಭೋಗ | ಹರಿಇತ್ತನು ಅನುಗ್ರಹ ಯೋಗ | ಸ್ವಂತಹಸ್ತದಿ ಪೂಜಾದಿ ಯೋಗ | ಮಾಳ್ಪಕೃತ್ಯ ಸಂಧಿಸಿದನು ಈಗ | ಆಹಚಿತ್ತಜ ಪಿತ ವಿಠಲ | ಭಕ್ತವತ್ಸಲ ದೇವನಿತ್ತಕಾರುಣ್ಯವ | ತುತ್ತಿಸಲೆನಗಳವೇ 11 ಪಿತೃ ಸೇವಕ ಪುಂಡಲೀಕ | ತನ್ನಕೃತ್ಯದೊಳಿರೆ ನಿರ್ವಲ್ಕೀಕ | ಹರಿವ್ಯಕ್ತ ತನ್ಭಕ್ತ ಪರೀಕ್ಷಕ | ನಾಗೆಭಕ್ತನು ಮನ ಸ್ಥೈರ್ಯಾಲೋಕ | ಆಹಇತ್ತ ಇಟ್ಟಿಗೆ ಪೀಠ | ಮೆಟ್ಟಿ ನಿಂತಿಹ ದೇವಕೃತ್ತಿ ವಾಸಾದ್ಯರಿಂ | ಸ್ತುತ್ಯ ಶ್ರೀ ವಿಠಲನ 12 ದಾಸೀಗೆ ಕಂಕಣವಿತ್ತು | ಹರಿದಾಸರ ರೂಪೀಲಿ ನಕ್ತ | ಕಳೆದಾಶು ದಾಸರ ಶಿಕ್ಷಕರ್ತ | ಮತ್ತೆದಾಸರ ನಿರ್ದೋಷ ವಾರ್ತ | ಆಹದಾಸನೋರ್ವಾ ವೇಶ | ಭೂಷಣ ಕೇಳುತ್ತವಾಸುಕಿ ಶಯನೊಲಿದ | ದಾಸ ಪುರಂದರಗೆ 13 ಮುಯ್ಯಕೆ ಮುಯ್ಯ ತೀರಿತು | ಜಗದಯ್ಯ ವಿಠಲನ್ನ ಕುರಿತು | ಪೇಳಿಕಯ್ಯನೆ ಮುಗಿದರು ತ್ವರಿತು | ದಾಸಮೈಯ್ಯ ಬಿಗಿದ ಕಂಬ ಒಳಿತು | ಆಹತ್ರಯ್ಯ ಲೋಕದಿ ದಾಸ | ಅಯ್ಯನ ಪೆಸರಾಯ್ತುತ್ರಯ್ಯ ಗೋಚರ ಹರಿ | ಪ್ರೀಯ್ಯನಿಗೊಲಿದಂಥಾ 14 ಅಂಡ ಬ್ರಹ್ಮಾಂಡಗಳೊಡೆಯ | ಭಕ್ತಪುಂಡಲೀಕನಿಗೊಲಿದ ಭಿಡೆಯ | ರಹಿತಚಂಡ ಕಿರಣಾನಂತ ಪ್ರಭೆಯ | ಹರಿಮಂಡಿತಿಂದು ಭಾಗ ತಡಿಯ | ಆಹಹಿಂಡು ದೈವರ ಗಂಡ | ಪುಂಡರೀಕ್ಷಾಕನೆಪಿಂಡಾಂಡದೊಳಗಿಹ | ಗಂಡನೆಂದೆನಿಸಿಹಗೆ 15 ಪುರಂದರ ವಿಜಯ ಭಾಗಣ್ಣ | ಮತ್ತೆವರ ಜಗನ್ನಾಥವರ್ಯ | ಬಹುಪರಿಠವಿಸಿತ್ತೆ ಮೃಷ್ಠಾನ್ನ | ದಾಸವರರ ಸೇವಕ ಸೇವಕನ್ನ | ಆಹಪುರಂದರದಾಸರ ದಿನ | ದರುಶನ ವಿತ್ತಿಹೆಅರಿದಾಯ್ತೆನ್ನಯ ಕುಲ | ಪರಮ ಧನ್ಯವೆಂದು 16 ಇಂದು ಭಾಗದಿ ವಾಸ ಜಯ | ಸಿರಿಇಂದಿರೆ ಲೋಲನೆ ಜಯ | ದಾಸಮಂದಗಭೀಷ್ಟದ ಜಯ | ಎನ್ನತಂದೆ ತಾಯಿ ಬಂದು ಜಯ | ಆಹ ಸುಂದರ ಗುರು ಗೋವಿಂದ ವಿಠಲ ಹೃ-ನ್ಮಂದಿರದೊಳು ತೋರಿ | ಬಂಧನ ಬಿಡಿಸುವ 17
--------------
ಗುರುಗೋವಿಂದವಿಠಲರು
ಶ್ರೀ ಲಕ್ಷ್ಮೀಸ್ತುತಿ ನಿವಾಸಿನಿ ಸಿರಿಯೆ ಪ ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ ತೋರು ನಮ್ಮ ಮನಗೆ ಅ.ಪ ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು ಆಕಳು ಕರುವಿನ ಸ್ವೀಕರಿಸುವಪರಿ ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ 1 ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ ಮಗನಪ ರಾಧವ ತೆಗೆದೆಣೆಸದಲೆ ಲಗು ಬಗೆಯಿಂದಲಿ ಪನ್ನಗವೇಣಿ2 ಕಡೆಗೆ ನಮ್ಮನೆ ವಾಸ ಒಡೆಯ 'ಅನಂತಾದ್ರೀಶ' ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು ರೂಢಿಗುಚಿತವಿದು ನಡೆ ನಮ್ಮ ಮನೆಗೆ 3
--------------
ಅನಂತಾದ್ರೀಶರು
ಶ್ರೀ ವರದ ಗೋಪಾಲ | ವಿಠಲ ಪ್ರಾರ್ಥಿಪೆ ನಿನ್ನದೇವ ತವ ದಾಸ್ಯವನು | ಬವಿಕಾಂಕ್ಷಿಪನ ಪ ನೀವೊಲೀದಿವನ | ಸ್ವೀಕರಿಸುವುದಯ್ಯಪಾವಮಾನಿ ಪ್ರಿಯ ಶು | ಭಾವಹ ಪ್ರದನೇ ಅ.ಪ. ವಿಶ್ವ ವ್ಯಾಪಕ ಹರಿಯೆ | ಅಶ್ವಮೊಗ ನಿನ್ನಂಘ್ರಿಸುಸ್ವರದಿ ಕೀರ್ತಿಸುವೆ | ಶಾಶ್ವತಾನಂದಾನಶ್ವರ ಜಿಹಾಸೆಯನು | ವಿಶ್ವಾಸದಿಂದಿತ್ತುವಿಶ್ವಕುಟುಂಬಿಕನೆ | ಹ್ರಸ್ವಗೈ ಕರ್ಮಾ 1 ಅನುವಂಶಿಕವಾಗಿ | ಗಾನಕಲೆ ಇವನೀಗೆನೀನೇವೆ ಕರುಣಿಸಿಹೆ | ವೇಣುಗೋಪಾಲಮಾನನಿಧಿ ಮಧ್ವ ಕಾ | ರುಣ್ಯ ಪಾತ್ರನು ಎನಿಸಿಜ್ಞಾನ ಭಕ್ತ್ಯಭಿವೃದ್ಧಿ | ಮಾಣದಲೆ ಗೈಯ್ಯೋ 2 ಏಸೇಸೋ ಜನುಮಗಳ | ರಾಶಿ ಪುಣ್ಯದ ಫಲವುಕೈಸೇರಿ ಆಶಿಸುವ | ದಾಸದೀಕ್ಷೆಯನುಲೇಸಾಗಿ ತೈಜಸನ | ಆಶಿಷವ ಕೈಕೊಂಡುಮೀಸಲ ಮನದಿ ಉಪ | ದೇಶವಿತ್ತಿಹನೋ 3 ತೃಕ್ಷಾದಿ ದಿವಿಜೇಡ್ಯ | ಪಕ್ಷಿವಹ ಕೃಷ್ಣ ಹೃ-ತ್ಕುಕ್ಷಿಯೊಳು ತವರೂಪ | ಈಕ್ಷಿಸುವ ಭಾಗ್ಯಭಿಕ್ಷೆಯನು ಇತ್ತು ಉ | ಪೇಕ್ಷಿಸದೆ ಪೊರೆ ಇವನಅಕ್ಷೀಣ ದಯಸಾಂದ್ರ | ಲಕ್ಷುಮಿಯ ರಮಣ 4 ಭಾವದ್ರವ್ಯ ಕ್ರಿಯವು | ಈ ವಿಧಾದ್ವೆತತ್ರಯ ಆವ ಸುಜ್ಞಾನವನು | ಈವುದಿವನೀಗೆ |ದೇವದೇವೇಶ ಗುರು | ಗೋವಿಂದ ವಿಠಲನೆಈ ವಿದಧ ಭಿನ್ನಪವ | ನೀ ವೊಲಿದು ಸಲಿಸೋ5
--------------
ಗುರುಗೋವಿಂದವಿಠಲರು
ಸಲಹೊ ನಿನ್ನವನೀತನೆಂದೆಲ್ಲ ಕಾಲ ಹೃತ್ಕಮಲದಲ್ಲಿ ನಿಲ್ಲೋ ಪ ಸೊಲ್ಲುಸೊಲ್ಲಿಗೆ ಶ್ರೀ ವೇಣುಗೋಪಾಲನೆಂದೆಲ್ಲ ಕಾಲದಿ ನುಡಿಸೊ ನಲಿಸೊಅ.ಪ ಕರಣತ್ರಯಗಳಿಂದ ಮಾಡಿದ ಕಾರ್ಯವು ಕರುಣಾಕರ ನಿನ್ನದೊ ಕರಣನಿಯಾಮಕ ನೀನಲ್ಲದಿಲ್ಲವೊ ಕರುಣಿಸೋ ಸತತ ಶ್ರೀಹರಿಗುರುಭಕುತಿಯ 1 ಪಂಚಭೇದ ತಾರತಮ್ಯ ತಿಳಿದು ಜ್ಞಾನ ಪಂಚಕಗಳಿಂದಲಿ ಪಂಚಾತ್ಮಕ ವಿ- ರಿಂಚಿ ಪವನರೊಳು ನಿರ್ವಂಚನೆ ಭಕುತಿಯಾ ಕಿಂಚಿತ್ತಾದರು ಕೆಡದೆ 2 ಮಾ ಕಳತ್ರನೆ ನಿನ್ನ ಅ- ನೇಕ ಮಹಿಮನೆಂದು ಏಕಮನಸಿನಿಂದ- ಅ ನೇಕ ಕಾಲವು ಪಾಡಿ ದಾಸನೆಂದೆನಿಸಿ ಸ್ವೀಕರಿಸುವುದು ಈಗ ಶ್ರೀ ವೇಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು