ತೆಗೆ ತೆಗೆ ಬಾಗಿಲನ್ನು ಲಕ್ಷ್ಮೀಪತಿ
ತೆಗೆ ತೆಗೆ ಬಾಗಿಲನ್ನು ಪ
ತೆಗೆ ತೆಗೆ ಬಾಗಿಲ ಜೋಗಿ ಕೇಶವದಾಸ
ನಗುತ ಬಂದಿರುವನು ಸ್ವೀಕರಿಸಿನ್ನು ಅ.ಪ.
ಹÉೀಸಿ ಸಂಸಾರವನ್ನು ತ್ಯಜಿಸಿ ಬಿಟ್ಟು
ಆಶೆಪಾಶೆಗಳನ್ನು
ಸಾಸಿಮೆ ಕಾಳಿಗೆ ಸರಿಮಾಡಿ ಭವವನ್ನು
ವಾಸುಕಿ ಶಯನ ಶ್ರೀ ಲೋಲನ ನಂಬೀ 1
ನಿನ್ನಯ ಭಜನೆಯನು ಮಾಡುತ ಬಂದೆ
ನಿನ್ನಯ ಸ್ಮರಣೆಯನು
ಪನ್ನಗ ಶಯನ ಶ್ರೀ ದಾಸದಾಸರ ಪೋಷ
ಮನ್ನಿಸಿ ನೋಡಲು ಚರಣವ ನಂಬೀ 2
ನಿನ್ನಯ ಲೀಲೆಯಲ್ಲೀ ವೇಷವ ಹಾಕಿ
ನಿನ್ನ ನಾಟಕದಲ್ಲಿ
ಚನ್ನಾಗಿ ಕುಣಿದು ಲೋಕದೊಳಹÀುತಿಯನಾಗಿ
ಚನ್ನಕೇಶವ ಸೂತ್ರಧಾರನ ನಂಬೀ 3