(ವಿಜಯದಾಸರ ಪ್ರಾರ್ಥನೆ)
ಜಯ ಜಯ ವಿಜಯೇಂದ್ರ ಜಿತಬುದ್ಧಿ ತಂದ್ರ
ನಯ ನೀತ ಗುಣ ಸಾಂದ್ರ ನುತ ರಾಮಚಂದ್ರ ಪ.
ಅಷ್ಟಮಹಾಸಿದ್ಧಿಯರಿತ ಗಂಭೀರ
ಗಜ ಕುಂಭದಾರ
ಕೃಷ್ಣಾರಾಧಕ ಚತು:ಷಷ್ಟಿಕಳಾಧಾರ
ಇಷ್ಟ ಸಿದ್ಧಿಗಳ ಪಾಲಿಸು ಬೇಗ ಧೀರ 1
ಶೇಷಾದ್ರಿನಾಥನ ಕರುಣೈಕ ಪಾತ್ರ
ವ್ಯಾಸ ಮುನೀಂದ್ರ ಕರಾಬ್ಜಜ ಪುತ್ರ
ದೋಷವೆಣಿಸದೆ ಸ್ವೀಕರಿಪುದೇ ಸ್ತೋತ್ರನೀ ಸಲಹುವದಾರಾಧಿತ ಮಾಕಳತ್ರ 2