ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬ್ರಹ್ಮಾಂಡ ಪುರಾಣದ ಕರುಣಾಕರ ಸ್ತೋತ್ರದ ಅನುವಾದ) ಶ್ರೀ ರಮಣನೆ ನಮೋ ಎಂದು ನುತಿ ಪೇಳ್ವೆನಿಂದು ಪ. ನಿನ್ನನು ದೂಡದಿರನ್ಯರ ಬಳಿಗೆ ಪಾದ ಕಾಪಾಡು ದೇಹವ ದಾಢ್ರ್ಯದೊಳಗೆ 1 ಈಶನು ನೀ ಎನಗೆಂದಿಗು ನಿನ್ನ ದಾಸನಾದುದರಿಂದ ಪೋಷಕರನು ಕೃಪೆಯಿಂದ 2 ಎನ್ನ ಭರಣಕನ್ಯರಸಡ್ಯೆಯೇನು ಕಂಬುರುಹಾಕ್ಷಾಶ್ರಿತ ಕಾಮಧೇನು 3 ಫಣಿರಾಜಶಯನ ಶ್ರೀಕಾಂತ ಎನಗೆ ಸಿದ್ಧಾಂತ 4 ಕಲ್ಕಿರುವ ಸ್ವಾಪಲ್ಕಿವರದ ನಿನ್ನ ಶುಲ್ಕದಾಸಗೆ ಭಯವಿಲ್ಲ ಫಲ್ಕಸ ಪಾವನ ಮನದಿ ನೀಯಿರಲನ್ಯ ಕಲ್ಕಗಳುಂಟೆ ಭೂನಲ್ಲ 5 ಹೆಚ್ಚಾದರ್ಥಗಳುಂಟೆ ಪೇಳು ತಡಮಾಳ್ಪದಾಶ್ಚರ್ಯ ಕೇಳು ದಯಾಳು 6 ತಾಯೆ ತನ್ನಣುಗಗೆ ಗರವನಿಕ್ಕೆ ಬೇರೆ ಕಾಯುವರುಂಟೆ ಬೇಗದಲಿ ಲೋಕದಲಿ 7 ದಾತ ಪರಿತ್ರಾತ ಜ್ಞಾತದಯಾನ್ವಿತನೆಂದು ಪಾಲಿಸು ಗುಣಸಿಂಧು 8 ನೀ ನಿರ್ವಹಿಸುವಿಯೆಂದು ತಿಳಿದೆ ಎನ್ನಯ ವಾರ್ತೆಗೊಳದೆ9 ನೀ ಬಿಡದಿರು ಹರಿಯೆ ಸರ್ವಾರ್ಥದಾಯಕ ಎನ್ನ ದೊರೆಯೆ 10 ಎಂದು ಪೇಳ್ದೆದು ಶ್ರುತಿ ನಿಂದು ಭವ ಬೇಗ ಓಡಿ ಬಂದು 11 ಎನ್ನೊಳ್ಯಾಕೆ ನಿರ್ದಯವು ಬೇಗ ಪರಿಹರಿಸಾಧ್ಯಾತ್ಮಿಕಾರ್ತಿ 12 ಶಕುತಿಯದ್ಭುತವಲ್ಲ ಸ್ವಾಮಿ ಬಹುದು ಸುಪ್ರೇಮಿ 13 ಪಂಡಿತಜನರು ಲೋಕದಲಿ ಪುಂಡರೀಕಾಕ್ಷ ನೀನರಿವಿ 14 ದಯೆದೋರು ಭೃಂಗಾಳಕಾಂತ ದಿನಕಾಂತ ದಯೆದೋರೊ ಬೇಗ ನಿಶ್ಚಿಂತಾ 15 ಕರಗಳ ಮುಗಿದು ಸ್ವೀಕರಿಪುದು ಬುಧುರರಿದು. 16
--------------
ತುಪಾಕಿ ವೆಂಕಟರಮಣಾಚಾರ್ಯ
(ವಿಜಯದಾಸರ ಪ್ರಾರ್ಥನೆ) ಜಯ ಜಯ ವಿಜಯೇಂದ್ರ ಜಿತಬುದ್ಧಿ ತಂದ್ರ ನಯ ನೀತ ಗುಣ ಸಾಂದ್ರ ನುತ ರಾಮಚಂದ್ರ ಪ. ಅಷ್ಟಮಹಾಸಿದ್ಧಿಯರಿತ ಗಂಭೀರ ಗಜ ಕುಂಭದಾರ ಕೃಷ್ಣಾರಾಧಕ ಚತು:ಷಷ್ಟಿಕಳಾಧಾರ ಇಷ್ಟ ಸಿದ್ಧಿಗಳ ಪಾಲಿಸು ಬೇಗ ಧೀರ 1 ಶೇಷಾದ್ರಿನಾಥನ ಕರುಣೈಕ ಪಾತ್ರ ವ್ಯಾಸ ಮುನೀಂದ್ರ ಕರಾಬ್ಜಜ ಪುತ್ರ ದೋಷವೆಣಿಸದೆ ಸ್ವೀಕರಿಪುದೇ ಸ್ತೋತ್ರನೀ ಸಲಹುವದಾರಾಧಿತ ಮಾಕಳತ್ರ 2
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿದೇ ಶ್ರೀ ವಿಠಲನ ನೋಡಿದೆ ಪ ಕುಂಡಲ ಧರನ ಅ.ಪ. ದಾಸರಂದದಿ ಕಾವಿ ವಸನ | ಹೊದ್ದುಭಾಸೀಸುತಿಹ ಸಿರಿವರನ | ವಸನಮೀಸಲನವನು ತೆಗೆಯಲದನ | ಕಂಡೆಲೇಸಾದ ಶಾಲು ಹೊದ್ದವನ | ಆಹಕಾಶಮೀರದ ಶಾಲು | ಭಾಸುರ ಜರೆ ಖಚಿತಭೂಷಿತ ಹರಿ ಕುಳಿತು | ತೋಷಿಪ ಭಕುತರನ 1 ಸುತ್ತಿಹ ಪಾವಡೆ ಶಿರಕೇ | ಬಲುಸುತ್ತು ಸುತ್ತಿರುವುದು ಅದಕೆ | ಹರಿಮಸ್ತಕ ಛಂದ ಕಾಂಬುದಕೆ | ನೋಡಿಭಕ್ತ ಸಂದಣಿಯ ತೋಷಕ್ಕೆ | ಆಹಸುತ್ತಿಹುದನು ಬಿಚ್ಚೆ | ತುತ್ತಿಸುತಿರಲಾಗಕೃತ್ತಿವಾಸನ ತಾತ | ನೆತ್ತಿ ನೈಜವ ಕಂಡೆ 2 ಪೂಜಾರಿ ತೆಗೆಯಲು ಜರಿಯ | ಶಾಲುಮಾಜಾದೆ ವಿಠಲನ ಪರಿಯ | ಕಂಡೆನೈಜದ ಶ್ರೀವರನ ದ್ವಯ | ಹಸ್ತಯೋಚಿಸಿ ಕಟಿಲಿಹ ಪರಿಯ | ಆಹಸೋಜಿಗತನರೂಪ | ನೈಜದಿ ತೋರುತಪೂಜಾದಿ ಸ್ವೀಕಾರ | ವ್ಯಾಜಾವ ಕಂಡೆನು 3 ನಿರ್ಮಲಾಕೃತಿ ಪೊದ್ದ ಹಾರ | ತುಳಸಿಕಮ್ಮಲ ರ್ಸೂಸುವಧಾರಾ | ಕಾರಒಮ್ಮೇಲಿ ತೆಗೆದರಪಾರ | ದಯಸುಮ್ಮನ ಸರಿಗೀವ ಪೋರ | ಆಹಆಮ್ಮಹ ದೈವನ | ಇಮ್ಮಡಿ ಪ್ರಭೆ ಕಂಡನಿರ್ಮಾಲ್ಯ ತೆಗೆಯುವ | ಕರ್ಮಾಚರಿಸೂವಲ್ಲಿ 4 ಪಾದ | ಸ್ವೀಕರಿಸುವ ಭಕ್ತತೋಕನ ಬಿಂಬೋದ | ಶ್ರೀಕರ ದಳ ತುಳಸಿ 5 ನಾಕ್ಹತ್ತು ಭುವನಗಳ್ಜೋತಿ | ಮತ್ತನೇಕಾನೇಕಾಕಾರ ಜ್ಯೋತಿ | ಗಳೊಪ್ರಕಾಶ ಪ್ರದ ಪರಂಜ್ಯೋತಿ | ಮುಕ್ತಿಪ್ರಕಾರ ದೊಳಗಿವನೆ ಜ್ಯೋತಿ | ಆಹಏಕಮೇವ ಹರಿಗೆ | ಕಾಕಡಾರುತಿ ಮಾಳ್ಪಲೋಕರ ಪೂಜೆಯ | ಸ್ವೀಕರಿಪುದ ಕಂಡೆ 6 ಪಂಚ ಮೋಕ್ಷ ಪ್ರದ ಹರಿಗೆ | ಆಯ್ತುಪಂಚ ವಿಧಭಿಷೇಕ ಆವಗೆ | ಶೇಷಮಂಚಿಕೆ ಕ್ಷೀರಾಬ್ದಿಶಯಗೆ | ಮಧುಸಂಚನ ಮಧ್ವಿದ್ಯ ಹರಿಗೆ | ಆಹಪಂಚಾಮೃತಭಿಷೇಕ | ಸಂಚಿಂತಿಸುವನೀಗೆಸಂಚಿತ ಕರ್ಮವ | ಕೊಂಚವ ಮಾಡುವ 7 ಮಂಗಳ ಮಹಿಮಗ ಸ್ನಾನಾ | ಅವಗಂಗಾ ಪಿತನೆಂಬುದೆ ಮಾನ | ಹಾಗೂಅಂಗಜನಯ್ಯಗೆ ಸ್ನಾನಾ | ಆಯ್ತುಹಿಂಗದೆ ಲೋಕ ವಿಧಾನಾ | ಆಹಸಂಗೀತಲೋಲ ಸ | ತ್ಸಂಗವು ತುತಿಸಲುಸ್ವಾಂಗಾಯನಾಮ ಶು | ಭಾಂಗನು ಮೆರೆದನು 8 ಕಾಯ ವರೆಸಿ | ಬಹುಶಾಸ್ತ್ರೋಕ್ತಿ ಉಡಿಗೆಯ ಉಡಿಸಿ | ಮತ್ತೆರತ್ನಧ್ಯಾಭರಣವ ತೊಡಿಸಿ | ಚೆಲ್ವಕಸ್ತೂರಿ ತಿಲಕವನಿರಿಸಿ | ಆಹವಿಸ್ತøತೀಪರಿಯಲಿ | ಸತ್ಯ ಷೋಡಶ ಪೂಜೆಚತ್ತುರ ಮೊಗನಿಂದ | ಕೃತ್ಯಾನು ಸಂಧಾನ 9 ವೇದ ಘೋಷ ಪೂಜಾ ಮಂತ್ರ | ಬಹುನಾದ ವಿಠಲ ನಾಮ ಮಂತ್ರ | ತುಂಬಿಮೋದ ಪೂರೈಸಿತು ತಂತ್ರ | ಘಂಟೆನಾದದಿಂದಾರುತಿ ಕೃತ | ಆಹಆದರದಿಂದ ಪ್ರ | ಸಾದವು ಸ್ವೀಕೃತಮೋದದಿ ವಿಠಲನ | ಪಾದಾಲಿಂಗಾಂತ್ಯವ 10 ಉತ್ಕøಷ್ಟ ಸುಕೃತದ ಭೋಗ | ಹರಿಇತ್ತನು ಅನುಗ್ರಹ ಯೋಗ | ಸ್ವಂತಹಸ್ತದಿ ಪೂಜಾದಿ ಯೋಗ | ಮಾಳ್ಪಕೃತ್ಯ ಸಂಧಿಸಿದನು ಈಗ | ಆಹಚಿತ್ತಜ ಪಿತ ವಿಠಲ | ಭಕ್ತವತ್ಸಲ ದೇವನಿತ್ತಕಾರುಣ್ಯವ | ತುತ್ತಿಸಲೆನಗಳವೇ 11 ಪಿತೃ ಸೇವಕ ಪುಂಡಲೀಕ | ತನ್ನಕೃತ್ಯದೊಳಿರೆ ನಿರ್ವಲ್ಕೀಕ | ಹರಿವ್ಯಕ್ತ ತನ್ಭಕ್ತ ಪರೀಕ್ಷಕ | ನಾಗೆಭಕ್ತನು ಮನ ಸ್ಥೈರ್ಯಾಲೋಕ | ಆಹಇತ್ತ ಇಟ್ಟಿಗೆ ಪೀಠ | ಮೆಟ್ಟಿ ನಿಂತಿಹ ದೇವಕೃತ್ತಿ ವಾಸಾದ್ಯರಿಂ | ಸ್ತುತ್ಯ ಶ್ರೀ ವಿಠಲನ 12 ದಾಸೀಗೆ ಕಂಕಣವಿತ್ತು | ಹರಿದಾಸರ ರೂಪೀಲಿ ನಕ್ತ | ಕಳೆದಾಶು ದಾಸರ ಶಿಕ್ಷಕರ್ತ | ಮತ್ತೆದಾಸರ ನಿರ್ದೋಷ ವಾರ್ತ | ಆಹದಾಸನೋರ್ವಾ ವೇಶ | ಭೂಷಣ ಕೇಳುತ್ತವಾಸುಕಿ ಶಯನೊಲಿದ | ದಾಸ ಪುರಂದರಗೆ 13 ಮುಯ್ಯಕೆ ಮುಯ್ಯ ತೀರಿತು | ಜಗದಯ್ಯ ವಿಠಲನ್ನ ಕುರಿತು | ಪೇಳಿಕಯ್ಯನೆ ಮುಗಿದರು ತ್ವರಿತು | ದಾಸಮೈಯ್ಯ ಬಿಗಿದ ಕಂಬ ಒಳಿತು | ಆಹತ್ರಯ್ಯ ಲೋಕದಿ ದಾಸ | ಅಯ್ಯನ ಪೆಸರಾಯ್ತುತ್ರಯ್ಯ ಗೋಚರ ಹರಿ | ಪ್ರೀಯ್ಯನಿಗೊಲಿದಂಥಾ 14 ಅಂಡ ಬ್ರಹ್ಮಾಂಡಗಳೊಡೆಯ | ಭಕ್ತಪುಂಡಲೀಕನಿಗೊಲಿದ ಭಿಡೆಯ | ರಹಿತಚಂಡ ಕಿರಣಾನಂತ ಪ್ರಭೆಯ | ಹರಿಮಂಡಿತಿಂದು ಭಾಗ ತಡಿಯ | ಆಹಹಿಂಡು ದೈವರ ಗಂಡ | ಪುಂಡರೀಕ್ಷಾಕನೆಪಿಂಡಾಂಡದೊಳಗಿಹ | ಗಂಡನೆಂದೆನಿಸಿಹಗೆ 15 ಪುರಂದರ ವಿಜಯ ಭಾಗಣ್ಣ | ಮತ್ತೆವರ ಜಗನ್ನಾಥವರ್ಯ | ಬಹುಪರಿಠವಿಸಿತ್ತೆ ಮೃಷ್ಠಾನ್ನ | ದಾಸವರರ ಸೇವಕ ಸೇವಕನ್ನ | ಆಹಪುರಂದರದಾಸರ ದಿನ | ದರುಶನ ವಿತ್ತಿಹೆಅರಿದಾಯ್ತೆನ್ನಯ ಕುಲ | ಪರಮ ಧನ್ಯವೆಂದು 16 ಇಂದು ಭಾಗದಿ ವಾಸ ಜಯ | ಸಿರಿಇಂದಿರೆ ಲೋಲನೆ ಜಯ | ದಾಸಮಂದಗಭೀಷ್ಟದ ಜಯ | ಎನ್ನತಂದೆ ತಾಯಿ ಬಂದು ಜಯ | ಆಹ ಸುಂದರ ಗುರು ಗೋವಿಂದ ವಿಠಲ ಹೃ-ನ್ಮಂದಿರದೊಳು ತೋರಿ | ಬಂಧನ ಬಿಡಿಸುವ 17
--------------
ಗುರುಗೋವಿಂದವಿಠಲರು
ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್