ಕಾವಲಿರು ಕಮಲಾಕ್ಷ ಕರುಣಿ ನಿರಪೇಕ್ಷ
ದೇವ ದೇವಾಧ್ಯಕ್ಷ ದುರಿತಾಳಿಶೀಕ್ಷ ಪ.
ಪಾಂಡುಕುವರರ ಪರಮ ಪ್ರೇಮದಿಂದಲಿ ಕಾಯ್ದೆ
ತೋಂಡಮಾನಗೆ ಚಕ್ರ ಶಂಖಗಳನಿತ್ತೆ
ಪಂಡಿತಾಗ್ರಣಿ ಬಲಿಯ ಬಾಗಿಲೊಳು ಶಾಙ್ರ್ಞಕೋ-
ದಂಡ ಶರಗಳ ಧರಿಸಿಕೊಂಡು ಕಾಪಾಡುವನೆ 1
ವಿತತರೂಪನೆ ನಿನ್ನೊಳಿಟ್ಟಹೆನು ಭರವಸವ
ಸತತ ನೀ ಸಲಹುವುದು ಸರ್ವಸ್ವವ
ಕ್ಷಿತಿಯನಾಳುವ ಜನರೊಳಂತರಾತ್ಮಕ ನೀನೆ
ಗತಿಯೆಂದು ನಂಬಿದೆನು ಗರುಡಾಂಗಗಮನ 2
ಕಂಟಕವ ಪರಿಹರಿಸು ಕಂಠೀರವಾಸ್ಯ ವೈ-
ಕುಂಠಗಿರಿಯರಸ ಮೂರೆಂಟು ತತ್ವೇಶ
ಸ್ವಿಂಟನಾಭಿದನ ನಿಷ್ಕಂಟತನವನು ಬಿಡಿಸಿ
ಬಂಟವಾಗಿಹರ ಮೇಲೆ ತಂಟೆ ಬರದಂದದಲಿ 3