ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಧನ್ವಂತ್ರಿ ಸ್ತೋತ್ರ(ನಾರಾಯಣಾಚ್ಯುತ ವಿಠಲ ದಾಸಿಗಾಗಿ) ಕಾರುಣ್ಯ ನಿಧಿ ತವಾ | ಪಾರ ಮಹಿಮೆಯ ಕೇಳಿಸಾರಿದೆನೊ ಪಾದಾಬ್ಜ ಶರಣೆಂದು | ಶರಣೆಂದೆಶ್ರುನಾಥಪಾರು ಮಾಡಾಕೆಯ ವೃಜಿನವ 1 ಆಂತ್ರಕೆಟ್ಟಿಹುದೆಂದು | ತಾಂತ್ರಿಕರು ಪೇಳುವರುಆಂತ್ರ ಸರಿಮಾಡುವ ಕಾರ್ಯವ | ಕಾರ್ಯನಿರ್ವಹಿಸಿ ಸ್ವಾ-ತಂತ್ರ ಪುರುಷಾ ದಯತೋರೋ 2 ಪಾದ ಭಜಿಸೂವ | ಭಜಿಸೂವ ದಾಸಿಗೆಈ ರೀತಿ ಭವಣ್ಯಾಕೊ ಧನ್ವಂತ್ರಿ 3 ಆರೋಗ್ಯ ಆಯುಷ್ಯ | ಆರಾಧಕರ್ಗೀವೆಈರನುತ ಧನ್ವಂತ್ರಿ ಕರುಣಾಳು | ಕರುಣಾಳು ಸರ್ವಜ್ಞಆರೋಗ್ಯ ದಾಸಿಗೆ ಕೊಡು ಎಂಬೆ4 ಧಂ ಎಂದು ಉಚ್ಛರಿಸೆ | ಧ್ವಂಸ ಮಾಡುವೆ ರೋಗಧನಂತ್ರಿಯೆನ್ನೆ ಭವರೋಗ | ಭವರೋಗ ವಾರಿಸುವಧನ್ವಂತ್ರಿ ರೂಪಿ ನಮೊ ಎಂಬೆ 5 ಕರದಲ್ಲಿ ಸುಧೆ ಕಲಶ | ಧರಿಸಿರುವ ಬಗೆಯೇನೊಶರಣರ್ಗೆ ಸುಧೆಯಾನುಣಿಸುತ್ತ | ಉಣಿಸುತ್ತಲಮರತ್ವಕರುಣಿಸುವಿ ಎಂದೂ ಶ್ರುತಿ ಸಿದ್ಧ 6 ಇಂತಿರಲು ದಾಸಿಸ | ತ್ಪಂಥಗಳನ್ನುದ್ದರಿಸೊಅಂತು ತವ ಚರಣಾಬ್ಜ ಬೇಡುವೆ | ಬೇಡುವೆನೋಪಾದಾಕ್ರಾಂತಳಿಗೆ ಸುಧೆಯಾ ನೂಣೀಸೊ7 ಚಂದ್ರ ನಿವಹದ ಕಾಂತಿ | ಯಿಂದಮೃತ ಕಿರಣದಿಂಹೊಂದ್ಯಮಿತ ಸುಖರೂಪಿ ಉಲ್ಲಾಸವೀವುತ್ತಚಂದುಳ್ಳ ಸುಧೆ ಕಲಶ ಪಿಡಿಯುತ್ತ 8 ಆತು ಜ್ಞಾನಾಂಕವನು | ಆತ್ಮಸ್ಥಶೀತಾಂಶುಧೌತ ಮಂಡಲಗ ಲಕ್ಷ್ಮೀಶ | ಲಕ್ಷ್ಮೀಶ ಹರಿಯನ್ನುಮಾತು ಮಾತಿಗೆ ನಾನು ಸ್ಮರಿಸೂವೆ 9 ಉತ್ತಮಾಂಗದಲಿರುವ | ಹತ್ತೆರಡು ದಳ ಕಮಲಪ್ರಸ್ಥಿತನು ಧನ್ವಂತ್ರಿ ಮಕರಂದ | ಮಕರಂದ ಸ್ರವಿಸುವನಭಕ್ತಿಯಲಿ ಸ್ಮರಿಸೋದು ರೋಗಾರ್ತೆ 10 ಕಮಲ ಹೃದಯಸ್ಥ 11 ಸದನ ಷಟ್ದಳ ಕಮಲಗುದವು ಮೂಲಾಧಾರಾನಾಲ್ದಳವುನಾಲ್ದಳ ಕಮಲಸ್ಥಬದಿಗನು ಧನ್ವಂತ್ರಿ ರೂಪೀಯು 12 ರೂಪೀ ಈ ದೇಹವನು | ವ್ಯಾಪಿಸುತ ತಾನಿದ್ದುಕಾಪಾಡಲೋಸುಕದಿ ಮಕರಂದ | ಮಕರಂದ ಸುರಿಸುವವ್ಯಾಪಾರದಿಂ ಜೀವರುದ್ಧಾರ 13 ಹತ್ತಿರುವ ಅಜ್ಞಾನ | ವತ್ತಿಬಹ ಭಯದುಃಖಮತ್ತೆ ಮಹವಿಷವು ಇದರಿಂದ | ಇದರಿಂದ ಪರಿಹಾರ ಭಕ್ತಿಯಿಂ ಭಜಿಸೇ - ಸುಖ ಸೌಖ್ಯ 14 ಶರಣರ್ಗೆ ತಪ್ಪದೆಲೆ | ಗೆರೆವೆ ಸೌಖ್ಯಂಗಳನುಗುರು ಗೋವಿಂದ ವಿಠಲಾ | ವಿಠ್ಠಲ ಧನ್ವಂತ್ರಿಮರುತಾಂತರಾತ್ಮಾ ಸಲಹಯ್ಯ15
--------------
ಗುರುಗೋವಿಂದವಿಠಲರು
ಶ್ರೀವರ ಶುಭಗುಣನಿಚಯ ರಮಾಸ್ವದ ಪಾಲಯ ಮಾಂ ಸತತಂ ಪ. ನೀಲ ಮೇಘ ಶೋಭ ಸುಖ ಕಲ್ಲೋಲ ನಿತ್ಯಲಾಭ ಲೋಲಾಂಬಕ ಕಮಲಾಲಯವರ ಕರು ಣಾಲವಾಲ ಮಾತಾಲಿಸು ತ್ವರಿತದಿ 1 ಮಂದಹಾಸದಿಂದ ಮೆಚ್ಚಿದ ಸುಂದರೇಶ ವೃಂದ ಹೊಂದುತ ಹೊಸ ಪರಿಯಿಂದ ರಮಿಸಿ ಸ್ವಾ- ನಂದವಿತ್ತ ಗೋವಿಂದ ಮುಕುಂದ 2 ದಾಸಾನಂದಕರ ನಿತ್ಯವಿಲಾಸಿತ ಸುರನಿಕರ ಶ್ರೀಶಯನ್ನನಕಲುಷಿತ ಪೂರಿಸು ಶೇಷಗಿರಿಯ ಶ್ರೀವಾಸ ಪರಾತ್ಪರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು