ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯೆಂಬ ಬೀಜ ಬಿತ್ತಯ್ಯ ಅದರಲ್ಲಿ ಬೆಳೆವ ಮುಕ್ತಿಯೆಂಬ ಫಲವ ತಿನ್ನಯ್ಯ ಪ ಭಕ್ತಿಯೆಂಬ ಬೀಜ ಬಿತ್ತಿ ತ್ಯಾಗವೆಂಬ ಕ್ಷೇತ್ರದಲ್ಲಿ ಶಕ್ತಿ ಮೀರಿ ನೀರ ಸಂಚಿ ಯುಕ್ತಿಯಿಂದ ಸಾಕಿರೋ 1 ಪ್ರೀತಿಯಿಂದ ಮರವ ಸೇರಿ ಧರ್ಮವೆಂಬ ಟೊಂಗೆ ಹತ್ತಿ ಆತುರದೀ ಜ್ಞಾನವೆಂಬ ಕುಸುಮವನ್ನೇ ಮೂಸಿರೋ 2 ಹರಿಯು ಕೊಡುವ ಹಣ್ಣ ನೀವು ತೆಗೆದುಕೊಂಡು ತೋಷದಿಂದ ನೋಡಿರೋ 3 ಮುಕ್ತಿಯೆಂಬ ಹಣ್ಣ ನೀವು ಸ್ವಾರ್ಥವೆಂಬ ಸಿಪ್ಪೆ ಬಿಸಟು ಭಕ್ತರಂತೆ ಕೇಶವಾಯೆಂದು ಭಕ್ತಿಯಿಂದ ತಿನ್ನಿರೋ 4
--------------
ಕರ್ಕಿ ಕೇಶವದಾಸ