ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು 1 ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ 2 ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ 3 ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ 4 ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ5 ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು 6 ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ 7 ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ 8
--------------
ಇಂದಿರೇಶರು
ಬಾರೆನ್ನ ಸಖಿಯೇ ಕರೆದು ತೋರಿಸೇ ಪ ಕರೆದು ತೋರಿಸೇ ಕಂಜನಯ್ಯಾನಾ| ಕರಿವರ ದಾಯಕ ಕರುಣಾ ಸಾಗರನಾ 1 ಸರಸಿಜ ಲೋಚನ ಮುಕುಟ ಕುಂಡಲನಾ| ಕೌಸ್ತುಭ ಕೇಯೂರ ಧರನಾ 2 ಮದನ ಶರಕ ಗುರು ಮಾಡುವರೇನೇ| ಮಧುಹರ ಮುನಿವದು ಉಚಿತ ವೇನೇ 3 ಒಂದರಗಳಿಗೆಯ ಮರೆದಿರ ಲಾರೆ| ಇಂದು ನೀ ಧನ್ಯಳ ಮಾಡಲೆ ನೀರೆ4 ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ| ನೆರೆದನು ಗುರು ಮಹಿಪತಿ ಸುತಸ್ವಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು