ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ ಮುಕುತಿದಾಯಕ ರಂಗ ನೀನಿರಲು ಪ ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ ಹೀನ ಸರಿತೆಗಳಲ್ಲಿ ಮುಣುಗುವರೇ ಏನ ಬೇಡಿದ ನೀವ ಸುರ ಭೂಜ ಇದಿರಿಡಲು ಕಾನನದ ಶಾಲ್ಮಲಿಯ ಫಲವ ನರಸುವಂತೆ 1 ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ ಆ ಮೊಲದ ಹಾಲವನು ಬಯಸುವಂತೆ ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ2 ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ ದಾಯಕ ನಿನ್ನ ಮರದನ್ಯಕೆರಗೀ ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೊಲ್ಲಭ ಗುರು ಮಹಿಪತಿಯ ತೋರಮ್ಮ ಪ ಭಂಜನ ಗೆರಗುವ ಅವಸರವಿಲ್ಲಾ | ಕಂಜ ಮೊಗವ ತೊಳಿಯಲುದುಕ ಕಲಶಕಾ | ಲಂಜಿಯೂಳಿಗದವರೆಡೆಯಾಟವಿಲ್ಲ 1 ಗುರುಪೂಜೆಯಲಿ ರೂಪ ಗೋಚರವಿಲ್ಲಾ | ಇದುರಿಗೆ ಎದುರಲಿ ಕುಳಿತು ಕೀರ್ತನೆಯಲಿ | ಬೋಧ ನುಡಿಧ್ವನಿಯಲ್ಲಾ2 ಇಂತು ಹಂಬಲಿಸುವ ಮನವೆಂಬ ಪ್ರಕೃತಿಗೆ | ಅಂತರಂಗದಿ ತನ್ನ ಸುಳುಹನೆ ದೋರಿ | ನಿಂತನು ಎತ್ತ ನೋಡಲು ತಾನೇ ತಾನಾಗಿ | ಭ್ರಾಂತಿ ಬಿಡಿಸಿದನು ನಂದನ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ ಮಂದರಧರನೇ ಬೇಲೂರ ಚೆನ್ನಿಗರಾಯ ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ ಕುಕ್ಷಿಯೊಳೀರೇಳು ಲೋಕವನು ತಾಳ್ದನೇ ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ 1 ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ ¨Àಕ್ತವತ್ಸಲನು ನೀನೇ ಸ್ವಾಮಿ 2 ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ [ಉರಿಸಿ]ಗೆಲಿದ ದೇವರದೇವಾ ಸ್ವಾಮಿ3 ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು ಸಂದೇಹವಿಲ್ಲದಂದದಲಿ ಪಾಲಿಸಿ ನರನಾ ಮುಂದೆ ಸಾರಥಿಯಾಗಿ ರಥವ ನಡಸಿದ ಗೋ ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] 4 ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು ಭೂಸ್ವರ್ಗವೆನಿಪ ವೇಲಾಪುರವಾಸಾ ಕೇಶವ ಶ್ರೀವೈಕುಂಠ ಚೆನ್ನಿಗರಾಯಾ ಶೇಷಶಯನನೇ ಕರುಣಿಸೈ ಸ್ವಾಮೀ 5
--------------
ಬೇಲೂರು ವೈಕುಂಠದಾಸರು
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ1 ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2 ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ3 ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4 ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ5
--------------
ಚಿದಾನಂದ ಅವಧೂತರು
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ಮಹದಾದಿ ದೇವ ವಂದ್ಯ | ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು ರಹಸ್ಯಮತಿ ಕೊಡುವುದು ಸ್ವಾಮಿ ಪ ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ ಅನಂತ ಜನುಮವಾಗೆ ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು ಜ್ಞಾನಿಗಳಿಗರಿವಾಗಿದೆ ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ ಮಾನವನ ಕ್ಲೇಶಕೆಣಿಯೆ ಆನಂದ ನಂದನನೆ ತೃಣವ ಪಿಡಿದು ರುತುನ ವನು ಮಾಡಿ ತೋರುವ ಸ್ವಾಮಿ 1 ನಿನ್ನಧೀನ ಕರ್ಮಸ್ವಭಾವ ಮೊದಲಾಗಿ ಅನ್ಯಥಾ ಯಲ್ಲಿ ಕಾಣೆ ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ ಬಿನ್ನಪವ ಬರಿದೆನಿಸದೆ ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ ನಿನ್ನ ದಾಸನ ದಾಸನು ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ ಸನ್ನನಾಗೋ ಪಾವನ್ನರನ್ನ 2 ನರರಿಗೆ ಸಾಧನ ಸತ್ಕೀರ್ತನೆ ಎಂದು ಪರಮೇಷ್ಠಿ ಒರೆದನಿದಕೊ ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ ದುರಿತ ಬೆಮ್ಮೊಗವಾಗವು ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ ಶರಣರೊಳಗಿಟ್ಟು ಕಾಪಾಡು ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ3
--------------
ವಿಜಯದಾಸ
ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ. ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು 1 ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ ನಿನ್ನ ವೈಭವ ಧ್ಯಾನ ಅಮೃತಪಾನ ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು 2 ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ3 ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ 4 ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು ಧೇನಿಸುತ ಆನಂದಮಗ್ನರಾಗಿ ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು 5 ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ ಕಮಲ ರಜವ ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ 6 ಅಮಿತ ವೈಭವ ಗಾತ್ರ ಕಾಳಕೂಟವನುಂಡು ಮೆರೆದ ಮಹಿಮ ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ 7 ರೇಣು ತೃಣ ಕಾಷ್ಟ ಬಹಿರಂತರದಲ್ಲಿ ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ 8 ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ ಬಂಟ ಸತತ ಹರಣ ವೃಕೋದರ ವೀರ ಶ್ರೀ ಮನೋಹರನÀಲ್ಲಿ ದಾಸ್ಯ ದೀಕ್ಷೆಯ ದೇಹಿ 9 ಪನ್ನಗ ರುದ್ರ ಸುರಗಣವು ಮೊದಲಾದ ಚರಾಚರ ಭ್ರೂ ಚಲನ ಮಾತ್ರದಿಂದ ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ ಘನ ಮಹಿಮ ವರ ವೇದ ಪ್ರತಿಪಾದ್ಯ 10 ಪರಮಮಂಗಳ ಜಯೇಶವಿಠಲನಂಘ್ರಿ ಸರಸಿಜವ ಬಿಡದ ಮಧುಪರಾಜ ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ 11
--------------
ಜಯೇಶವಿಠಲ
ಸತಿ ಸುತರು ನಾವಿವರೊಳೇಕೆ ಮರುಳಾದೆವಿಂತು ಗುರುವೆಪ್ರಾಕು ಜನ್ಮದ ವಾಸನೆಗಳೆಂಬ ಪಗೆಗಳಿಲ್ಯಾಕೆ ನೂಕಿದರೆಮ್ಮನೂ ಸ್ವಾಮಿ 1ಎಂತು ಬಂತೀ ರಕ್ತ ಮಾಂಸಾಸ್ತಿ ಚರ್ಮಗಳಿವೆಂತು ವಿಣ್ಮೂತ್ರಂಗಳೂ ದೇವಾಎಂತು ರಾಗದ್ವೇಷ ಮದಮತ್ಸರಂಗಳಲ್ಲೆಂತು ನರಕ ಸ್ವರ್ಗವೂ ಪರಮಾಎಂತು ಬಂತೀ ಭೋಗ ರೋಗ ವಾಸನೆಗಳಿಲ್ಲೆಂತು ವ್ಯಾಮೋಹಂಗಳು ಗುರುವೆಎಂತು ಚಿಂತೆಗಳಿದರೊಳಭಿಮಾನ ಕಷ್ಟಂಗಳೆಂತೆಂದು ನಾವರಿಯೆವೂ ಸ್ವಾಮಿ 2ಎಂತು ರಾಗ ದ್ವೇಷ ಪೋಗಿ ಸಾಧನೆಗಳೆಮಗೆಂತಹುದು ಚಿತ್ತ ಶುದ್ಧಿ ಪರಮಾಎಂತು ವೇದಾಂತ ತಿಳವದು ಬೊಮ್ಮ ನಿತ್ಯ ತೃಪ್ತೀ ಗುರುವೆಅಂತು ಕರುಣಿಸಿ ಸಕಲಚಿಂತೆಗಳ ಪರಿಹರಿಸನಂತ ಗೋಪಾಲಾರ್ಯನೆ ಸ್ವಾಮಿ3
--------------
ಗೋಪಾಲಾರ್ಯರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಸ್ವಾಮಿ ಶಂಕರನಿರಲಿಕ್ಕೆಕಾಮದಕಳವಳಿಕೇಕೆಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಗುರುನಾಮ ನಿಧಾನಿರಲಿಕ್ಕೆ | ಎನಗಿಲ್ಲೆಂಬುವದೇಕೆ ಅ.ಪ.ಅನಾಥ ಬಂಧುಅನುದಿನಎನಗಿರೆ |ಅನುಕೂಲದ ಚಿಂತ್ಯಾಕೆ |ತನುಮನಧನದೊಳು ತಾನೆ ತಾನಿರಲು |ಅನುಮಾನಿಸಲಿನ್ಯಾಕೆ ಸ್ವಾಮಿ1ದಾತನೊಬ್ಬ ಶ್ರೀನಾಥ ಎನಗಿರಲು |ಯಾತಕೆ ಪರರ ದುರಾಶೇ |ಮಾತು ಮಾತಿಗೆ ತೋರುವಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ2ದೊಡ್ಡದು ಸಣ್ಣದು ಧಡ್ಡನು ಜಾಣನು |ಎಂದೆಣಿಸುವದಿನ್ಯಾಕೆ | ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ3
--------------
ಜಕ್ಕಪ್ಪಯ್ಯನವರು