ಬಲು ದೊಡ್ಡಸ್ವಾಮಿ ಮೂಲೋಕದೊಡಿಯ ನಮ್ಮ ಧ್ರುವ
ಅನಂತಕೋಟಿ ಬ್ರಹ್ಮಾಂಡ ಅನುದಿನನಾಳುತ ಪ್ರಚಂಡ
ತಾನೆ ಆಗ್ಯಾನೆ ಅಖಂಡ ಘನಗುರು ಮಾರ್ತಾಂಡ 1
ವಿಭೀಷಣಗೆ ಸ್ಥಿರಕೊಟ್ಟ
ದುಷ್ಟರ ಜನರ ಕುಟ್ಟಿ ನಿಷ್ಠುರ ನಿಜಶ್ರೇಷ್ಠ 2
ಶಿಷ್ಟರಜನರಿಗಭಯವ ನಿಜನೋಡಿ
ಮುಟ್ಟಿ ಮುದ್ರಿಸಿ ದಯಮಾಡಿ ಪೃಷ್ಠದಲಿ ನೋಡಿ 3
ಗ್ರಾಸವು ತಂದಿಪ್ಪ
ಚಿತ್ಪ್ರಕಾಶದ ಸ್ವರೂಪ ಭಕ್ತರ ಪಾಲಿಪ 4
ನಾಮದೊಲವಿಲೆ ತನುನಿಜಭಾಗ್ಯ
ಸ್ವಾಮಿಸೇವೆಗೆ ಮಾಡಿದ ಯೋಗ್ಯ ಪ್ರೇಮದಂತಾಭೋಗ್ಯ 5