ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು