ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ನೀಚಮನಸಿಗೆ ಮಾಡಲಿನ್ನೇನು ಥೂ ನಾಚಿಕಿಲ್ಲದಕೆ ಉಪಾಯವೇನು ಪ ಹರಿಚರಣ ಸ್ಮರಿಸುವುದು ಹರಿದಾಟ ಮರಿವಲ್ಲದು ಪಿರಿದುನುಡಿಯಾಡುವುದು ಕಿರಿಗುಣವ ಬಿಡದು ಪರಲೋಕ ಬಯಸುವುದು ನಿರುತದಿಂ ನಡಿವಲ್ಲದು ಶರಣರೊಡನೆನದಿಹ್ಯದು ಪರನಿಂದೆ ಬಿಡದು 1 ಜ್ಞಾನನುಡಿ ಪೇಳುವುದು ನಾನೆಂಬುದಳಿವಲ್ಲದು ಧ್ಯಾನದೊಳಗಿರುತಿಹ್ಯದು ಶ್ವಾನಕಲ್ಪನ್ಹಿಂಗದು ದಾನಗುಣ ಬೋಧಿಪುದು ಜೀನತ್ವ ತೊರಿವಲ್ಲದು ಆನಂದ ಬೇಡುವುದು ಹೀನಭ್ರ್ರಾಂತಿ ಬಿಡದು 2 ಸಾದುಪಥದಾಡುವುದು ಭೇದ ಕಡಿವಲ್ಲದು ವೇದಾಂತ ಕೇಳುವುದು ಸಾಧನಕೆ ಒಲ್ಲದು ಪಾದಭಕ್ತಿ ಬೇಡುವುದು ಕ್ರೋಧ ತೊಡಿವಲ್ಲದು 3 ನಾಮಭಜನೆ ಮಾಡುವುದು ತಾಮಸವ ತುಳಿವಲ್ಲದು ಸ್ವಾಮಿಯೊಲುಮೆ ಕೋರುವುದು ಪಾರತ್ವ ಬಿಡದು ಕಾಮಿತೊಲ್ಲೆನೆನ್ನುವುದು ಭಾಮೆ ಭೂಮಿಪ್ರೇಮ ಬಿಡದು ಕ್ಷೇಮ ಸದಾ ಬೇಡುವುದು ನೇಮನಿತ್ಯ ಒಲ್ಲದು 4 ಶಾಸನವ ಪೇಳುವುದು ತಾಸು ಸ್ಥಿರ ನಿಲ್ಲದು ನಾಶಜಗವೆನುತಿಹ್ಯದು ಕಾಸು ಒಲ್ಲೆನ್ನದು ದೋಷನಾಶನ ಜಗದೀಶ ಶ್ರೀರಾಮನಡಿ ದಾಸನಾನೆಂಬುವುದು ವಾಸನೆಯ ಬಿಡದು 5
--------------
ರಾಮದಾಸರು