ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರಿಬಾರಿಗು ಹರಿ ಪಾದದಲಿ ಪ ಯುಕ್ತಿಯಾಗಿ ರಕ್ತಿನೀಗಿ | ಶಕ್ತಿಯೊದಗಿ1 ಯೇನು ಮಾಡಲಿ ಮಾನಸದಲಿ | ಜ್ಞಾನದಿಂದಲಿ 2 ಸ್ವಾಮಿಯೆನ್ನುತ ನೇಮ ವಿಡುತ | ಕಾಮಬಿಡುತ 3
--------------
ಗುರುರಾಮವಿಠಲ
ಯಾರು ಬಲ್ಲರು ವೆಂಕಟೇಶ ನಿನ್ನೊಳಿಹ ಚಾರು ಗುಣಶೀಲವೆಂಬ ವಾರಿಧಿಯ ಚಿಪ್ಪಿನೊಳು ಮೊಗೆದು ಬತ್ತಿಸುವಂಥ ವೀರನಾವನು ಜಗದೊಳು ಪ ಹದಿನಾಲ್ಕು ಲೋಕವನ್ನು, ನೀ ನಿನ್ನ ಉದರದೊಳಗಿರಿಸಿಕೊಂಡು ಉದಧಿಮಯವಾಗಿರ್ದ ಕಾಲದೊಳು ನಿನಗೊಂದು ಉದುರಿದೆಲೆಯೊಳು ನಿದ್ರೆಯಂತೆ 1 ಮಾಯೆ ಕಮಲಾಕರದೊಳು, ನಿನ್ನುದರ- ದಾಯತದಿ ತೋರಿ ನಿಲಲು ಮೋಹಿಸಲು ಆ ಕ್ಷಣದಿ ಕಾಯವಾಗಲು ಮೇಲೆ ಬಾಯಿ ನಾಲ್ಕಾಯಿತಂತೆ 2 ಅಲ್ಲಿ ತೋರಿದ ಸೊಲ್ಲನು, ಖಳನೋರ್ವ ನೆಲ್ಲವನು ಸೂರೆಗೊಳಲು ಮಲ್ಲನಾಗಿಯೆ ಜಲದಿ ಘಲ್ಲಿಸಿಯೆ ದೈತ್ಯನನು ಚೆಲ್ವಸಾರವ ಸೆಳೆದೆಯಂತೆ 3 ಅದರ ಆಧಾರದಿಂದ, ಸನಕಾದಿ- ಗುದಯವಾದುದುಯೆಲ್ಲವೂ ಮೊದಲ ಕಾಣದೆ ವೃಕ್ಷವದುರಿ ಬಿದ್ದುದ ನೋಡಿ ತುದಿಯೊಳಗೆ ಕದನವಂತೆ 4 ಒಳ ಹೊರಗೆ ನೀನೊಬ್ಬನೆ, ಹೊಳೆ ಹೊಳೆದು ಸುಳಿವ ಪರಿಯನು ಕಾಣದೆ ಮಲತಾಯಿ ಮಗನೊಳಗೆ ಕಲಹವಿಕ್ಕುವ ತೆರದಿ ಹೊಲಬುದಪ್ಪಿಯೆ ನಡೆವರಂತೆ 5 ಒಂದಿದರಿಂದೆರಡಾದುದು, ಮೂರಾಗಿ ಬಂದು ಇದಿರೊಳು ನಿಂದುದು ಒಂದು ಮಾತಿನೊಳೆರಡು ಸಂದೇಹಗಳ ತೋರಿ ಮಂದ ಬುದ್ಧಿಯ ಕೊಡುವೆಯಂತೆ 6 ಜಡವಾದ ಅಡವಿಯನ್ನು ಸಂಚರಿಸಿ ಒಡಲ ಹೊರೆವುದು ಕಡೆಯೊಳು ಎಡೆಯೊಳೊಪ್ಪಿಸಿ ಕೊಡುವಿಯಂತೆ 7 ನಂಬಿ ಬಂದವರ ನೀನು, ಮನದೊಳಗೆ ಹಂಬಲಿಸಿಕೊಂಡಿರುತಲೆ ಇಂಬಾಗಿ ಇಹಪರದಿ ಉಂಬ ಸಂಭ್ರಮವನ್ನು ಸಂಭವಿಸಿ ತೋರ್ಪೆಯಂತೆ 8 ಭೂಮಿಗೆ ವೈಕುಂಠವೆಂದು, ನಿಂತಿರುವ ಸ್ವಾಮಿಯೆನ್ನೆಡೆಗೆ ಬಂದು ಕ್ಷೇಮವನು ವರಾಹತಿಮ್ಮಪ್ಪ ಕರುಣದಿ ಕಾಮಿತಾರ್ಥವನೀಯೊ ಎಮಗೆ 9
--------------
ವರಹತಿಮ್ಮಪ್ಪ
ವನಜನಾಭ ನೀನೆ ದಯಾನಿಧಿ ಮೂರು ಜಗದೊಳಗೆ ಮಣಿದುಬೇಡ್ವೆ ಕನಿಕರದೆನ್ನ ರಿಣಮುಕ್ತನೆನಿಸು ಬೇಗ ಪ ಭಾವಿಗಳ ಭಾವಪೂರ್ಣ ದೇವ ದೇವ ವಿಮಲಮಹಿಮ ಸಾವು ಹುಟ್ಟುಯಿಲ್ಲದ ಘನ ಸ್ವಾಮಿಯೆನ್ನ ಮಾಡೋ ಪಾವನ 1 ವೇದವೇದ್ಯನೀತ ಅ ನಾದಿಕಾಲದ್ವಸ್ತುವೇ ನೀ ಸಾಧುಸುಜನೈಕ್ಯನೆನ್ನ ಮೋದದಿಂದ ಸಲಹೋ ಮುದ 2 ಭೂಮಿಗಧಿಕ ನಿಸ್ಸೀಮ ಸುಖಧಾಮ ಭೀಮ ಗಂಭೀರ ಎನ್ನ ಕಾಮಿತಾರ್ಥ ಕರುಣೆಗೈದು ಪ್ರೇಮದಾಳೆನ್ನೊಡೆಯ ಶ್ರೀರಾಮ3
--------------
ರಾಮದಾಸರು
ಸಾಗಿಬಾರಯ್ಯ ನಾಗಶಯನ ಪ ಭೋಗದಾಸೆ ನೀಗಿಸೆನ್ನು ಬೇಗ ರಕ್ಷಿಸು ಬಾಗಿ ಬೇಡ್ವೆ ಅ.ಪ ದುಷ್ಟಭವದರಿಷ್ಟದಲಿ ಇ ನ್ನೆಷ್ಟುದಿನ ನಾ ಕಷ್ಟಬಡಲಿ ದೃಷ್ಟಭ್ರಷ್ಟತೆ ನಷ್ಟಗೊಳಿಸಿ ಶಿಷ್ಟಸಂಗದೊಳಿಟ್ಟು ಸಲಹೊ 1 ಜನನ ಮರಣವ ನೆನೆಸಿಕೊಳ್ಳದೆ ಬಿನಗುತನದಲಿ ದಿನವಗಳೆದೆ ಅಣುಗನ ಘನತಪ್ಪು ಗಣಿಸದೆ ಘನ ಘನ ನಿಮ್ಮ ನೆನಹ ಪಾಲಿಸು 2 ಸ್ವಾಮಿಯೆನ್ನಯ ನೇಮವಿಲ್ಲದ ಕಾಮಿತಂಗಳ ದೂರಮಾಡಿ ಪ್ರೇಮದೆನ್ನಗೆ ಕ್ಷೇಮಕೊಡು ಶ್ರೀ ರಾಮ ಮೂಜಗ ಸಾರ್ವಭೌಮ3
--------------
ರಾಮದಾಸರು