ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪೆರ್ಡೂರು ಶ್ರೀ ಅನಂತಪದ್ಮನಾಭ) ಪದ್ಮನಾಭ ಚರಣವೆನ್ನ ಶಿರದೊಳಿಟ್ಟು ಪಾಲಿಸು ಮಾತ ಲಾಲಿಸು ಪ. ಆದಿಭೌತಿಕಾದಿ ನಾನಾ ಬಾಧೆಯಿಂದ ಬಳಲಿ ಬಹಳ ನೊಂದೆನು ಇಲ್ಲಿ ಬಂದೆನು ಮೂರ್ತಿ ನಿನ್ನ ಕರುಣವಾಗಲೆಂದು ಕೈಯ್ಯ ಮುಗಿದು ಬೇಡುವೆ ಮಹಿಮೆ ಪಾಡುವೆ ಕಾದರೊಳ್ಳಿತಿನ್ನು ನಿನ್ನ ಪಾದಸೇವೆ ಮಾಳ್ಪುದನ್ನು ಮಾಧವ ಮಛ್ಛಾದಿರೂಪ 1 ದುರುಳ ಭಾವವನ್ನು ಬಿಡಿಸಿ ಸಲಹಿನ್ನು ಕೊಟ್ಟು ಫಲವನ್ನ ಒರಳಿನಲ್ಲಿ ಕೊರಳ ಸಿಕ್ಕಿ ನರಳುವಂತಾಗಿರುವ ಕಷ್ಟ ಪರಿಯಾಯ ಸ್ವಾಮಿಯರಿಯೆಯ ಶರಣು ಶರಣು ಎಂದು ಮುಂದೆ ಹೊರಳಿ ಬೇಡಿಕೊಂಡು ನಿಂದೆ ಚರಣ ಪದ್ಮದಾಸರನ್ನು ಮರಿಯದೆ ಮಾನಿಸುವ ತಂದೆ 2 ರಾಜಕದಳಿಮಾಲಿಕಾ ವಿರಾಜಕಂಠ ಭಕ್ತ ಕಲ್ಪ ಭೂಜನೆ ರಾಜ ರಾಜನೆ ಮೂಜಗನ್ನಿವಾಸ ಪೂರ್ಣ ರಾಜರಂತರಾತ್ಮ ವ್ಯಸನ ರಾಜಿಯ ಕಡಿಸು ಬೋ ಜೀಯಾ ಈ ಜಗತ್ತಿನಲ್ಲಿ ನಿನ್ನ ಸೋಜಿಗವನರಿವರುಂಟೆ ತೇಜದಾಯಿ ವೆಂಕಟಾದ್ರಿ ರಾಜನೀನೆಂದರಿದೆ ನಿಂದು 3
--------------
ತುಪಾಕಿ ವೆಂಕಟರಮಣಾಚಾರ್ಯ