ಗೋಪಗೋವಿಂದ ವಿಠಲ | ನೀ ಪಾಲಿಸಿವಳಾ |ಸ್ವಾಪಜಾಗ್ರತ್ಸುಪ್ತಿ ಸರ್ವ ಕಾಲದಲೀ ಪ
ಪತಿಸುತರು ಭಾಂದವರು | ಹಿತದಿಂದ ಸೇವಿಸುತಕೃತಿಸರ್ವ ನಿನಸೇವೆ | ಮತಿ ನೀಡೊ ಹರಿಯೇ |ಅತುಳ ವೈಭವ ತೋರಿ | ಕೃತಕಾರ್ಯಳೆಂದೆನಿಸುಕ್ಷಿತಿರಮಣ ನಿನಗಿದುವೆ ಪ್ರಾರ್ಥಿಸುವೆ ದೊರೆಯೇ 1
ಮೋದಮುನಿ ಮತ ದೀಕ್ಷೆ | ಸಾದರದಿ ಕೊಟ್ಟೈದುಭೇದಗಳ ತಿಳಿಸುತ್ತ | ಕಾದುಕೊ ಇವಳಾನೀದಯದಲಂಕಿತವ | ಓದಿಸಿಹೆ ತೈಜಸನೆಸಾದಿಸುವೆ ಅದನೀಗ | ಹೇ ದಯಾವರನೇ 2
ಸಂಚಿತ ಕಳೆವ | ಧರ್ಮ ನಿನ್ನದೊ ಸ್ವಾಮಿಭರ್ಮ ಗರ್ಭನ ಪಿತನೆ | ಕರ್ಮನಾಮಕನೇ ನಿರ್ಮಮತೆ ಮನದಿ ನಿ | ಷ್ಕಾಮ ಕರ್ಮದಲಿವಳಪೇರ್ಮೆಯಲ್ಲಿರಿಸೆಂದು | ಸ್ವಾಮಿ ಪ್ರಾರ್ಥಿಸುವೇ 3
ಸರ್ವಜ್ಞ ಸರ್ವೇಶ | ಸರ್ವದಾ ತವನಾಮಸರ್ವತ್ರ ಸ್ಮøತಿಯಿತ್ತು | ಸರ್ವಾಂತರಾತ್ಮದುರ್ವಿಭಾವ್ಯನೆ ದೇವ | ದರ್ವಿ ಜೀವಿಯ ಕಾವಸರ್ವ ಕರ್ತೃವು ನೀನೆ | ಶರ್ವ ಸನ್ನುತನೇ 4
ಸೃಷ್ಟಿಕರ್ತನೆ ದೇವ | ಕಷ್ಟಗಳ ಪರಿಹರಿಸಿಶಿಷ್ಟಳ್ಹøತ್ಕಂಜದಲಿ | ಇಷ್ಟ ಪ್ರದನಾಗೀಇಷ್ಟ ಮೂರ್ತಿಯ ಕೋರಿ | ಹೃಷ್ಟಳನ ಮಾಡೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5