ಕಾರು ಯಾರಮನೆಗುಂಟು ಖೋಡಿ
ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ
ಕಾಯಜನಯ್ಯನ ದಿವ್ಯ ಚರಿತಗಳನ್ನು
ಬಾಯಿಂದ ಪೊಗಳುತ ಕೈಯಿಂದ ಬರೆದು
ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ
ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು 1
ನಳಿನನಾಭನ ವಿಮಲ ಸುಲಲಿತ ಮಹಿಮೆಗಳ
ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ
ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ
ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು 2
ಭೂಮಿಯೊಳಧಿಕ ಶ್ರೀರಾಮನ ದಾತೃತ್ವ
ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ
ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ
ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು 3