ಶ್ರೀಹರಿಸ್ತುತಿ
ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ
ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ
ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ
ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ
ಎದೆಯ ಮೇಲಿರುವ ಲಕ್ಷ್ಮಿ
ಕದನಮಾಡುತವೆ ಕೊಲ್ಲಾಪುರಕೆ ನಡೆತರಲು
ಒದಗಿ ವೈಕುಂಠ ಬಿಟ್ಟು
ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ
ಇದು ನಿನಗೆ ಸದನಾಯಿತೊ ದೇವ 1
ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು
ಉತ್ತಮ ಗೋವು ಬಂದು
ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ
ನೆತ್ತಿಯನೊಡೆದುಕೊಂಡು
ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು
ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2
ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ
ಭೂರಮಣನ್ವರಾಹನಿಂದ
ನೂರುಪಾದ ಭೂಮಿಕೊಟ್ಟರೆ ಸಾಕೆಂದು-
ಪಾಯದಿಂದದನ್ವ್ಯಾಪಿಸಿ
ತಾಯಿ ಬಕುಳಾದೇವಿಯಿಂದ ಪೂ
ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3
ನಾಟಕಧಾರಿ ಕಿರಾತರೂಪವ ಧರಿಸಿ
ಬೇಟೆಗೆನುತಲಿ ಪೋಗಲು
ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ
ನೋಟದಲಿ ಮನಸೋಲಿಸಿ
ಬೂಟಕತನದಿ ಜಗಳಾಟವನ್ನೆ ಮಾಡಿ
ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4
ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು
ಪದ್ಮಾವತಿ ವಾರ್ತೆಯನ್ನು ಬಳಿಯ
ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ
ಸಿದಾಕಾಶನಲ್ಲಿ ಚದುರಮಾತಿನ
ಚಪಲ ಕೊರವಂಜಿ ನೀನಾಗಿ ಕಣಿಯ
ಹೇಳಲು ಎಲ್ಲಿ ಕಲಿತೆಯೊ ಮಹದೇವ5
ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ
ಕರ ವೀರದಿಂದೆ
ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ
ಕೊಂಡು ಪರಮ್ಹರುಷದಿಂದ
ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ
ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6
ಆಕಾಶರಾಜ ಅನೇಕ ಹರುಷದಿ ಮಾಡೆ
ತಾ ಕನ್ಯಾದಾನವನ್ನು
ಹಾಕಿದ ರತ್ನಮಾಣಿಕ್ಯದ ಕಿರೀಟವನು
ಬೇಕಾದಾಭರಣ ಭಾಗ್ಯ
ಸಾಕಾಗದೇನೊ ಬಡವರ ಕಾಡಿ ಬೇಡುವುದು
ಶ್ರೀಕಾಂತ ನಿನಗೆ ಸರಿಯೆ ದೇವ 7
ಹೇಮಗೋಪುರದಿ ವಿಮಾನ ಶ್ರೀನಿವಾಸ
ದೇವರನು ನೋಡಿ ನಮಿಸಿ
ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ
ಗಂಬದ ಸುತ್ತ ಪ್ರಾಕಾರವೊ
ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ
ನೋಡಿದೆನು ನಿನ್ನ ಭಕುತರ ದೇವ 8
ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ
ವರ್ಣಿಸಲಳವೆ ನಮಗೆ
ಕಣ್ಣಾರೆಕಂಡೆ ಗರುಡೋತ್ಸವದಲಂಕಾರ
ಇನ್ನೆಲ್ಲು ಕಾಣೆ ಜಗದಿ
ಎನ್ನ ಕಿವಿಗಾನಂದವೊ ದೇವ 9
ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ
ಮೇಲಲೆವೊ ಪೀತಾಂಬರ
ಮಾಲೆ ಶ್ರೀವತ್ಸದ್ಹಾರ
ಮೇಲಾದ ಸರಿಗೆ ಸರ ಪದಕವೊ ಕಮಲ-
ದಳಾಯತಾಕ್ಷನ ನೋಡಿದೆ ದೇವ 10
ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ
ವರ ಶಂಖ ಚಕ್ರಧಾರಿ
ಗಿರಿಯ ಭೂವೈಕುಂಠವೆಂದು ತೋರುತ ನಿಂತ
ಶಿರದಿ ಕಿರೀಟ ಧರಿಸಿ
ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ
ಹೊಳೆವ ಮೂರ್ತಿಯ ನೋಡಿ ಹೇ ದೇವ11