ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆನೊ - ರಂಗಯ್ಯ ರಂಗನಿನ್ನ ನಾನೇಂದೆನೊ ಪ ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ಅ ಧೀರ ಸೋಮಕ ವೇದಚೋರ ಖಳನನು ಸೀಳಿವಾರಿಧಿಗಿಳಿದು ಪರ್ವತವನೆತ್ತಿಧಾರಿಣಿಯನು ಕದ್ದ ದನುಜದಲ್ಲಣನಾದನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆ - ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ - ಮಣ್ಣನಗೆದುಬೇರ ಮೆದ್ದವನೆಂದೆನೆ - ರಕ್ಕಸನೊಳುಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ 1 ಪಾಷಾಣ ಪತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ - ಹೆತ್ತ ತಾಯಶಿರವ ತರಿದನೆಂದೆನೆ - ವನವಾಸಕೆಭರದಿ ಚರಿಸಿದನೆಂದೆನೆ - ಪೂತನಿಯನುಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ 2 ಚಿತ್ತಜಕೋಟಿ ಲಾವಣ್ಯ ಮುಪ್ಪುರದಉತ್ತಮಸ್ತ್ರೀಯರ ವ್ರತವಳಿದುಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದಹತ್ತವತಾರದ ಹರಿಯೆಂದೆನಲ್ಲದೆಬತ್ತಲೆ ನಿಂತವನೆಂದೆನೆ - ತೇಜಿಯನೇರಿಒತ್ತಿ ನಡೆದವನೆಂದೆನೆ - ಬಾರಿಬಾರಿಗೆಸತ್ತು ಹುಟ್ಟುವನೆಂದೆನೆ - ಆದಿಕೇಶವಭಕ್ತವತ್ಸಲನೆಂದು ಪೊಗಳಿದೆನಲ್ಲದೆ 3
--------------
ಕನಕದಾಸ