ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಭಯದೊಳು ಬಿದ್ದು ಬರಲಾರೆನೆಂದು ಪ ಅಂಬೆಗಾಲೂರುತ್ತ ಕುಂಬಿಣಿ ತಿರುಗುತಡೊಂಬನಂಥ ಹೊಟ್ಟೆ ಎಳೆಯಲಾರೆನೆಂದು 1 ಕಂದನಾಗಿ ಬಂದು ಹಿಂದು ಮುಂದರಿಯದೆಇಂದುಧರನ ರೂಪ ಕಣ್ಣೊಳಗಿಟ್ಟುಕೊಂಡು 2 ಜನನ ಮರಣ ಹುಟ್ಟು ಮುರಿದು ಮೂಲ್ಯಾಗಿಟ್ಟುಚಿದಾನಂದ ಸ್ವಾಮಿನ್ನ ಕೂಡಿಕೊಂಡೆನೆಂದು 3
--------------
ಚಿದಾನಂದ ಅವಧೂತರು
ಶ್ರೀ ಲತಾಂಗಿಯ ವಲ್ಲಭಾ|ಎನ್ನ| ಪಾಲಿಸೋ ಭಕ್ತರ ಸುಲಭಾ ಪ ಇಂದೀವರದಳ ನಯನಾ ಮು| ಕುಂದ ಉರಗರಾಜ ಶಯನಾ| ಮಂದರೋದ್ಧರ ಪಾಪ ಶಮನಾ|ಗೋ| ವಿಂದ ಖಗೇಶ್ವರ ಗಮನಾ 1 ಶರಣ ಜನರಾಭರಣಾ|ಮುರ| ಹರ ಜಗದೀಶನೇ ಕರುಣಾ| ಪರಮಾನಂದ ಜೀತ-ದೂಷಣಾ|ಮ| ಕರಕುಂಡಲ ಸುಭೂಷಣಾ 2 ಸರಸಿಜ ಭವನುತ ಸ್ವಾಮಿನ್ನಾ|ಶ್ರೀ| ಹರಿ ಪೂರಿತ ಮನೋಕಾಮನ| ಶರಧಿ ಕೀಲನಾ|ಗುರು| ವರ ಮಹಿಪತಿ ಸುತ ಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು