ಭಿಕ್ಷಾಂ ದೇಹಿಮೇ ಸ್ವಾಮಿನ್
ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ
ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ
ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ
ಆರುಮಂದಿ ಶತ್ರುಗಳಿರುವರು ಬಲು
ಕ್ರೂರರಿವರು ಎನ್ನನು ಬಿಡರೊ
ದೂರ ಕಳುಹಲಾಹಾರವು ಸಾಲದು
ಶಮ ದಮ 1
ನಮ್ಮವರಿರುವರು ಹತ್ತುಮಂದಿಗಳು
ಸುಮ್ಮನಿರರು ಒಂದರಘಳಿಗೆ
ಸಮ್ಮತಿಗೊಡದಿರೆ ಬಳಲಿಸುವರು ಇವ
ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ 2
ಕತ್ತಲೆಯಲಿ ಬಂದಿರುವೆನು ಹೊಟ್ಟೆಯು
ಹತ್ತಿ ಹೋಯಿತೊ ಹಸಿವಿನಲಿ
ಎತ್ತ ಸುತ್ತಿದರೂ ತುತ್ತನು ಕಾಣೆನೊ
ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ 3