ಮಂಗಳಂ ಶ್ರೀ ರಘುಪುಂಗವನಿಗೆ ಜಯ
ಶುಭ 1
ಶಿಷ್ಟ ಜನಗಳಿಗೆ ಇಷ್ಟಾರ್ಥಗಳೀವ
ವೃಷ್ಟಿವರೇಣ್ಯ ಶ್ರೀ ಕೃಷ್ಣ ಮೂರುತಿಗೆ 2
ಸಚ್ಚಿದಾನಂದ ಸ್ವರೂಪಗೆ ಮಂಗಳಂ
ಸತ್ಯವತಿ ಸುಕುಮಾರಗೆ ಮಂಗಳಂ3
ಹೇಮಕಶಿಪುವಿನ ತನಯನಿಗೊಲಿದ
ನಾಮಗಿರೀಶ ಶ್ರೀ ಸ್ವಾಮಿನೃಸಿಂಹಗೆ 4
ತನ್ನ ಭಕುತರಿಗೆ ಹೊನ್ನು ಮಳೆಗರೆವ
ಪನ್ನಗಶಯನ ಪ್ರಸನ್ನವಿಠಲಗೆ 5