ನಮ್ಮ ಕುಲದೈವೀತ ಬೊಮ್ಮನ ಪಡೆದಾತ
ಸಾಮಗಾಯನ ಪ್ರೀತ ಸ್ವಾಮಿನೀತ ಧ್ರುವ
ವೇದ ಉದ್ಧರನೀತ ಮೇದಿನಿಯ ಪೊತ್ತಾತ
ಸಾಧುಜನ ವಂದಿತ ಸದ್ವಸ್ತುನೀತ 1
ಧಾರುಣಿಯ ಗೆದ್ದಾತ ತರಳಗೊಲಿದಹನೀತ
ದಾತ ಕರುಣಿ ಈತ 2
ಮೂರು ಪಾದಳಿದಾತ ಪರಶುಧರನಹುದೀತ
ಸುರಜನರ ಪೂಜಿತ ಸರ್ವೋತ್ಮನೀತ 3
ಪವನಸುತಗೊಲಿದಾತ ಮಾವನ ಮಡುಹಿದಾತ
ಭುವನತ್ರಯಲೀತ ದೇವನೀತ 4
ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ
ಭಕ್ತರಿಗೆ ಹೊರೆವಾತ ಶಕ್ತನೀತ 5
ಅಣುರೇಣುದೊಳೀತ ಅನುಕೂಲವಾದಾತ
ಆನಂದೋ ಬ್ರಹ್ಮ ಅನಂತನೀತ 6
ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ
ಮಹಿಪತಿಯ ಸಾಕ್ಷಾತ ವಸ್ತುನೀತ 7