ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಮಲೇಶ ಹರಿ ವಿಠ್ಠಲ | ಪೊರೆಯ ಬೇಕಿವನಾ ಪ ಕರುಣಾಳು ನೀನೆಂದು | ಪ್ರಾರ್ಥಿಸುವೆ ಹರಿಯೇಅ.ಪ. ತರಳನಿವ ಸಾಧನದ | ಸತ್ಪಥವ ಸಾಧಿಸಲುಹರಿದಾಸ ದೀಕ್ಷೆಯನು | ಕಾಂಕ್ಷಿಸುವ ಹರಿಯೇ |ಸರ್ವಬಗೆಯಲಿ ಇದಕೆ | ಪರಿಪರಿಯ ವಿಘ್ನಗಳಪರಿಹರಿಸಿ ಪೊರೆ ಇವನಾ | ಸರ್ವಾಂತರಾತ್ಮಾ 1 ಮರುತಮತ ದೀಕ್ಷೆಯಲಿ | ಇರುವಂತೆ ಕರುಣಿಸುತಪರತತ್ವ ಸಾರವನೆ | ಅರುಹುತಲಿ ಪೊರೆಯೋ |ವರಪಂಚ ಭೇಧಗಳ | ತರತರಾತ್ಮಕದರಿವುನೆರವಾಗಲಿವನೀಗೆ | ಗುರುದಯದಿ ಹರಿಯೇ 2 ಕಾಕುಸಂಗವ ಕೊಡದೆ | ಸತ್ಸಂಗ ಪ್ರಾಪಿಸುತಲೌಕಿಕೋನ್ನತಿ ಕೊಟ್ಟು | ನೀಕಾಯೊ ಹರಿಯೇ |ಪ್ರಾಕ್ಕು ಕರ್ಮವ ಕಳೆದು | ಬೇಕಾದ ವರಗಳನುನೀ ಕೊಟ್ಟು ಕಾಯೊ ಹರಿ | ಸಾಕಾರ ಮೂರ್ತೇ 3 ಗುರು ಹಿರಿಯ ಸೇವೆಯಲಿ | ಪರಮರತಿಯನೆ ಕೊಟ್ಟುಹರಿಗುರು ಚರಿತೆಗಳ | ಬರೆವ ಕೌಶಲವಾ |ಕರುಣಿಸೀ ಸತ್ಪಥದ | ಚರಿಪಂತೆಯ್ಯುಪ್ಪುದುಮರುತಾಂತರಾತ್ಮಕನೆ | ಉರುಗಾದ್ರಿ ನಿಲಯಾ 4 ಸರ್ವೇಶ ಸರ್ವಜ್ಞ | ಸರ್ವವ್ಯಾಪ್ತನೆ ಸ್ವಾಮಿನಿರ್ವಿಕಾರನೆ ದೇವಾ | ಶರ್ವಾದಿ ವಂದ್ಯಾ |ದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಶ್ರೀಹರಿಯೇಸರ್ವ ಸುಂದರ ಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದ ಗುರು ಗೋವಿಂದ ವಿಠಲ ಪೊರೆ ಇವನಾ ಪ ತರಳನನು ಒಪ್ಪಿಸಿಹೆ | ಕರಪಿಡಿಯೊ ಹರಿಯೆ ಅ.ಪ. ಮರುತ ಮತದಲಿ ಭಾವಿ | ಮರುತರೆಂದೆನಿಸುತಿಹಗುರುರಾಜ ಸಚ್ಚರಣ | ಕರುಣ ಪಾತ್ರಾಇರುವ ಈ ಶಿಶುವ ತವ | ಚರಣ ಕಮಲಂಗಳಿಗೆಅರ್ಪಿಸುತ ಭಿನ್ನವಿಪೆ | ನಿರುತ ಪೊರೆಯೆಂದು 1 ಗುರು ಹಿರಿಯರ ಸೇವೆ | ನಿರುತ ಗೈಯ್ಯುವ ಮನವಕರುಣಿಸುತ ಧರೆಯೊಳಗೆ | ಮೆರೆಸೊ ಕೀರ್ತಿಯಲೀಬರ ಬರುತ ವೈರಾಗ್ಯ | ಹರಿ ಗುರೂ ಸದ್ಭಕ್ತಿಉರುತರದ ಸುಜ್ಞಾನ | ಪರಿಪಾಲಿಸಿವಗೇ 2 ಭೃತ್ಯ ವತ್ಸಲನೇ 3 ಸರ್ವಗುಣ ಸಂಪೂರ್ಣ | ಸರ್ವವ್ಯಾಪ್ತ ಸ್ವಾಮಿನಿರ್ವಿಕಾರನೆ ದೇವ | ಶರ್ವ ವಂದ್ಯಾಸರ್ವದಾ ಸರ್ವತ್ರ | ದುರ್ವಿಭಾವ್ಯನೆ ಹರಿಯೆಪ್ರವರ ತವ ಸಂಸ್ಮರಣೆ | ಸರ್ವದಾ ಈಯೋ 4 ಜೀವ ಪರತಂತ್ರತೆಯ | ಭಾವುಕಗೆ ಅರಿವಿತ್ತುಭಾವದೊಳು ಮೈದೋರೊ | ದೇವದೇವೇಶಾಈ ವಿಧದ ಭಿನ್ನಪವ | ನೀ ವೊಲಿದು ಸಲಿಸುವುದುಮಾವಿನೋದಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು