ಚಂದಮ್ಮ ಬಲು ಚೆಂದಮ್ಮ ಗೋ
ವಿಂದನ ದಾಸರ ಸಂಗಮ್ಮ ಪ
ಪಾದ ಪದ್ಮಮ್ಮ ನೀ
ನ್ಹೊಂದಿ ಭಜಿಸು ಸದಾನಂದಮ್ಮ ಅ.ಪ
ಸಂದೇಹ ಕಡಿಯಂತರಂಗಮ್ಮ ಮು
ಕ್ಕುಂದನತಿಳಿ ನಿಜಲಿಂಗಮ್ಮ
ನಿಂದೆ ಬಳಸದಿರು ತುಂಗಮ್ಮ ಭವ
ಬಂಧವು ನಿನಗಿಲ್ಲ ಗಂಗಮ್ಮ 1
ಸಾಧಿಸು ನಿಜದೃಢ ತುಳಸಮ್ಮ ಸಂ
ಪಾದಿಸು ನಿಜಜ್ಞಾನ ಶರಣಮ್ಮ
ಸಾಧುಜನಕೆ ಬಾಗು ಸುಶೀಲಮ್ಮ ಪರ
ಸಾಧನೆ ನಿನ್ನಗೆ ಸರಸಮ್ಮ2
ಕಾಮಿತಕಳಿ ಭಾಗ್ಯಲಕ್ಷಮ್ಮ ನೀ
ತಾಮಸತೊಳಿ ಮನ ಸೀತಮ್ಮ
ಸ್ವಾಮಿಧ್ಯಾನಪಿಡಿ ಸತ್ಯಮ್ಮ ಶ್ರೀ
ರಾಮನ ನಂಬುನೀ ಮುಕ್ತ್ಯಮ್ಮ 3