ಕೊಂಡಾಡಬಹುದೆ ಯತೀಂದ್ರ ಎನ್ನಾ
ಪಾಂಡವಪ್ರಿಯನಾಭಜಕ ವಾದಿರಾಜಯತಿ ಪ
ನಾನಾ ಜನುಮದಾ ಯೋನಿಮುಖದಲಿ ಬಂದು
ಮಾನವಳಿದು ಜ್ಞಾನಶೂನ್ಯನಾಗಿಹ
ಶ್ವಾನಮನದ ಮೂಢಮನುಷ್ಯನಾಗಿ
ಹೀನ ಅಹಂಕಾರಪೂರಿತ ದೋಷಿಂiÀi1
ಅರಿಷಡ್ವರ್ಗದೊಳು ಸಿಲುಕಿ ನರಗುರಿಯಾಗಿ
ಪರರವಾರ್ತೆಯ ಸವಿವ ಹಗಲು ಇರಳೂ
ದುರುಳ ದುಶ್ಚೇಷ್ಟಿಕನು ಬಹುದುರಾತ್ಮನು ನಾನು
ಗುರುಹಿರಿಯರಿಗೆ ಎರಗದ ಗೂಢಪಾಪಿಯನು 2
ಒಡೆಯ ವೈಕುಂಠ ವಿಠಲನ ಭಜಿಸದೆ
ಪೊಡವಿಯೊಳು ಕ್ಷುದ್ರ ದೈವಗಳಿಗೆಲ್ಲ
ಪೊಡಮಡುತಿಹೆ ಸ್ವಾಮಿದ್ರೋಹಿ ಗರುವಿಯಾ
ಕಡುಪಾತಕನ್ನ ನಡತೆಯನು ನೀನರಿಯದಲೇ 3