ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ ಪ ಈ ಕರೆಕರೆ ಸಂಸಾರಶರಧಿಯೊಳು ನಿಂದೆ ಹರಿಯೆ ನಿಲ್ಲೊಂದರಘಳಿಗೆಯಾದರೂ ಮನದಿಅ.ಪ ತೋಯಜಾಂಬಕ ನಿನ್ನ ನಾನೆಂದಿಗೆ ಕಾಯದೊಳು ಕಾಂಬೆನೊ ಮಾಯಾರಮಣನೆ ನೀ ಮಾಯವ ಹರಿಸಯ್ಯ ಆಯಾಸಗೊಳಿಸದೆ ಕಾಯುವುದೀಗಲೆ 1 ನಾನಾಯೋನಿಗಳಲ್ಲಿ ನಾ ಬರಲಂಜೆನೋ ಶ್ವಾನಸೂಕರ ಜನ್ಮದಿ ನೀನಿಟ್ಟರಾದರು ಶ್ರೀನಿಧಿಯೆ ನಿನ್ನಯ ಸ್ಮ- ರಣೆ ಒಂದಿದ್ದರೆ ನಾ ಧನ್ಯ ಧನ್ಯನೋ2 ಲೋಕಾಲೋಕೋದ್ಧಾರನೆ ನಿನ್ನಾಜ್ಞೆಯಿಂ ನಾಕೇಶ ಮೊದಲಾದ ಪಿ- ನಾಕಿ ಪ್ರಮುಖರು ಅನೇಕ ಕಾರ್ಯವೆಸಗಿ ಶೋಕಪಡಿಸುವರಯ್ಯ 3 ದುರ್ಗಾಶ್ರೀರಮಣ ಎನ್ನ ಸಂಸೃತಿಯೆಲ್ಲ ದುರ್ಗಮವಾಗಿಹುದೊ ಸ್ವರ್ಗ ಅಪ- ವರ್ಗಪ್ರದನೆ ಎನ್ನಯ ಭವ- ದುರ್ಗಕಡಿದು ಸನ್ಮಾರ್ಗ ಕರುಣಿಸೊ 4 ಸ್ವಾಮಿತೀರ್ಥದಿವಾಸ ಶ್ರೀಜಗದೀಶ ಸ್ವಾಮಿ ಶ್ರೀ ವೆಂಕಟೇಶ ಪಾಮರನಾದೆನ್ನ ತಾಮಸ ಹರಿಸಿ ಹೃತ್ಕಮಲದಲಿ ನಿಲ್ಲೊ ಕಮಲಾಪತಿಯೆ ದೇವ 5
--------------
ಉರಗಾದ್ರಿವಾಸವಿಠಲದಾಸರು