ಮಂಗಳ ಜಯಮಂಗಳ ಶುಭ
ಮಂಗಳ ಶ್ರೀ ಗುರುಮೂರ್ತಿಗೆ ಧ್ರುವ
ವೇದೋದ್ಧಾರ ಶ್ರೀಮತ್ಸ್ಯಗೆ ಮಂಗಳ
ಮೇದಿನಿಯ ಪೊತ್ತ ಕೂರ್ಮಗೆ ಮಂಗಳ
ಕಾದಿ ಗೆದ್ದ ಶ್ರೀವರಾಹಗೆ ಮಂಗಳ
ಒದಗಿ ಮೂಡಿದ ನರಸಿಂಹಗೆ ಮಂಗಳ 1
ಧರಿಯೆ ದಾನವಕೊಂಡ ವಾಮನಗೆ ಮಂಗಳ
ಶೂರ ಪರಶುರಾಮಗೆ ಮಂಗಳ
ಶರಣ ರಕ್ಷಕ ಶ್ರೀರಾಮಗೆ ಮಂಗಳ
ಸಿರಿಯನಾಳುವ ಶ್ರೀಕೃಷ್ಣಗೆ ಮಂಗಳ 2
ಗುಹ್ಯ ಗೋಪ್ಯದಲಿಹ ಬೌದ್ದಗೆ ಮಂಗಳ
ಹಯವನೇರಿದ ಕಲ್ಕಿಗೆ ಮಂಗಳ
ಜಯ ಜಯ ಮಹಿಪತಿಸ್ವಾಮಿಗೆ ಮಂಗಳ
ದಯುವುಳ್ಳ ಶ್ರೀದೇವಿದೇವಗೆಮಂಗಳ3