ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸಾಹಸವಂತ ಈ ನಮ್ಮ ಹನುಮಂತ ಪ ವಾನರರೇ ನೀವ್ ಕೇಳಿ ಇವನೆಂಥ ಧೀಮಂತ ಅ.ಪ. ಸಾಗರವ ದಾಟುವೊಡೆ ಸಾಧ್ಯವೇ ಪರರಿಗೆ ಹೇಗೆ ಪೊಕ್ಕನೋ ಕಾಣೆ ದೈತ್ಯಪುರವ ಹೋಗಿ ಪುನರಪಿ ಬಂದನೆಂತು ತಾ ಜೀವದಲಿ ಬೀಗುತಿಹ ರಾವಣನ ಗರ್ವವನು ಮುರಿದಿಹನು 1 ಭೂಮಿಸುತೆ ಸೀತೆಯ ಕ್ಷೇಮವಾರ್ತೆಯನೆನಗೆ ನೇಮದಲಿ ತಂದಿತ್ತ ಕುಶಲಮತಿಯು | ಸ್ವಾಮಿಕಾರ್ಯವನಿಂತು ಸಾಧಿಸಿದ ಈ ಮಹಾವೀರನಿಗೆ ಸಮರಾರು ಧರೆಯೊಳಗೆ 2 ಮಿತಿಯಿಲ್ಲದುಪಕಾರ ಮಾಡಿರ್ಪನಿವಗಿನ್ನು ಪ್ರತಿಫಲವ ನಾನೇನು ಕೊಡಬಲ್ಲೆನು | ಪ್ರತಿಯಿಲ್ಲದೆನ್ನ ಆಲಿಂಗನವನೀವೆ ಶ್ರೀ ಪತಿ ಕರಿಗಿರೀಶನ ಪರಮಭಕ್ತನು ಈತ 3
--------------
ವರಾವಾಣಿರಾಮರಾಯದಾಸರು