ಭೂತ ರಾಜನುತ ವಿಠಲ | ಕಾಪಾಡೊ ಇವನಾ ಪ
ದಾತ ನೀನಲ್ಲದಲೆ | ಕಾವರಾರಿಹರೋ ಅ.ಪ.
ಗುರು ರೂಪಿ ತೈಜಸನು | ನೆರವಾಗಿ ಸ್ವಾಪದಲಿವರಸು ಉಪದೇಶವನು | ಇತ್ತು ಪೊರೆದಿಹನೋ |ಮರಳಿ ಇವ ಲಾತವ್ಯ | ಗುರುರಾಜ ಭಕ್ತನಿಹಪೊರೆಯ ಬೇಕಿವನೆನುತ | ಪ್ರಾರ್ಥಿಸುವೆ ಹರಿಯೇ 1
ನಿಷ್ಕಾಮ ಭಕ್ತನನ | ಮಾಡಿ ನೀ ಸಲಹಯ್ಯಸತ್ಕಾಮಗಳ ಗರೆದು | ಸಾಧನೆಯ ಗೈಸೀದುಷ್ಕಾಮಗಳಿಗೆಡೆಯ | ನೀ ಕೊಡದೆ ಪೊರೆಯಯ್ಯಸತ್ಕರ್ಮ ಸತ್ಸಂಗ | ಸರ್ವದಾ ಕೊಡುತಾ 2
ಸತಿಸುತರು ಹಿತರಲ್ಲಿ | ದುರ್ಮಮತೆ ಕಳೆಯುತ್ತಮತಿಮತಾಂ ವರರಂಘ್ರಿ | ಶತ ಪತ್ರರತನಾಹಿತದಿಂದ ನೀ ಸಲಹಿ | ಗತಿ ಪ್ರದನು ಆಗಯ್ಯಕೃತಿ ರಮಣ ಪ್ರದ್ಯುಮ್ನ | ಪ್ರತಿ ರಹಿತ ದೇವಾ 3
ಮಧ್ವಮತ ಪದ್ಧತ್ಯಭಿ | ವೃದ್ಧಿಗೈಸುತಲಿವಗೆಸಿದ್ಧಾಂತ ಜ್ಞಾನದಲಿ | ಸಿದ್ಧ ನೆನಿಸಯ್ಯಾವೃದ್ಧಿಯಾಗಲಿ ಜ್ಞಾನ | ವೈರಾಗ್ಯ ಭಕ್ತಿಗಳುಮಧ್ವರಮಣನೆ ದೇವ | ಬುದ್ಧಿ ಬೋದಕನೇ 4
ಬದಿಗ ನೀನಾಗಿದ್ದು | ಹೃದಯದವಕಾಶದಲಿಮುದದಿಂದ ತವರೂಪ | ತೋರಿ ಸಲಹಯ್ಯಾ |ಇದಕನ್ಯ ನಾ ಬೇಡೆ | ಯದು ವರೇಣ್ಯನೆ ಕೃಷ್ಣಸದಯ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5