ತಿಳಿ ಸತ್ಯರೂಪವÀ ಪರಮಾನುಭವವ
ಸುವಿಚಾರದಿಂದ ಯೋಚಿಸು ಜೀವಾ ಪ
ನಾ ನೀನು ಎನುವಾ ಇದು ಅದು ಎನುವ
ನಾನಾತ್ಮಭಾವಾ ಪುಸಿಯಿದು ಜೀವಾ
ಏನೊಂದು ಮಿಲ್ಲದೆ ತಾನುಳಿದಿರುವ
ಸ್ವಾನುಭವಾತ್ಮಾ ಸತ್ಯನಾಗಿರುವ 1
ಕರ್ತೃವೆನಿಸದ ಭೋಕ್ತøವೆನಿಸದ
ಅನಿಸಿಕೆಯಳಿದಾ ನಿತ್ಯನಿರಂಜನ
ಮಾಯಾವಿಲಾಸದಿ ತೋರುವನೀಪರಿ
ಕನಸಿನೊಲಿದುವೇ ಪುಸಿ ಈ ಜಗವು 2
ಅವಿಚಾರಗಳಿಗೆ ಬೇರಾಗಿ ತೋರೇ
ಸುವಿಚಾರದಿಂ ನೋಡೇ ತಿಳಿವುದು ಇದುವೇ
ಅದೇ ಪರಮಾತ್ಮನೇ ನೀನಿರುವಿಯಿದೋ
ಗುರು ಶಂಕರರಾರ್ಯನ ವರಬೋಧವಿದೋ 3