ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಳ್ಳನ ಹೆಜ್ಜೆಯನು | ಜಗದೊಳು ಕಳ್ಳನೇ ತಾ ಬಲ್ಲ | ಎಲ್ಲರಿಗಿದು ತಾನು | ಭೇದಿಸಿ | ನೋಡಲು ಅಳವಲ್ಲಾ ಪ ನಡುಮನಿಯೊಳು ಬಂದಾ | ಮಂದಿರಕನ್ನವ ಕೊರೆದಾ 1 ಸ್ವಪ್ರಭೆಯಲ್ಲಿ ಮೆರೆವಾ | ಅಲ್ಲಿಯ ಚಿದ್ರತ್ನವ ಕದ್ದಾ | ಸ್ವಾನುಭವದಿ ಮೆದ್ದಾ 2 ಕಳ್ಳರ ಸಂಗತಿಯಾ | ಮಹಿಪತಿ | ನಂದನ ತಾ ಮಾಡಿ | ಕದಿಯುತ ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ | ಪರಿ | ಪರಗತಿಯ ಸಾಧಕರಾಗುವ ಸಹಕಾರಿ | ಬೋಧ ಸುಧೆಯ ಉದಾರಿ | ಯುಕ್ತಿಯ ದೋರುವ ದಾರಿ 1 ಹಲವು ಶಾಸ್ತ್ರದ ಮಾತುಗಳ ಕೇಳಿ ಮುಂಗಾಣದೆ | ತೊಳಲುವ ಮನ ಸಂಶಯವಾ ವಂದು ಮಾತಿನಿಂದೆ | ಕಳೆದನು ದೃಢ ನೆಲೆಗೊಳಿಸಿ ಸ್ವಾನುಭವದಿಂದೆ | ಭವ ತಮ ಮೂಲದಿಂದಲೇ | ಬೆಳಗವ ದೋರುವ ತಂದೇ2 ಮೂಢ ಪಾಮರ ಮಂದಧಿಯನಾನೆಂದರಿಯೆನು | ನೋಡಿ ಕರುಣ ಕಟಾಕ್ಷದಲಿ ಮುಂದಕ ಕರೆದನು | ನೀಡಿ ಅಭಯ ಹಸ್ತವನು ರೂಢಿಯೊಳು ನಂದನೆನಿಸಿದನು | ಮಹಿಪತಿ ತ್ಯಾಜವಿತ್ತನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜ್ಞಾನಸುಧೆಯ ಪಾನಮಾಡಿ ಸ್ವಾನುಭವದಿ ಲೀನನಾದೆ ಹೀನ ಭವದ ತಾಪವೆನಗೆ ಬಾಧಿಸುತಿರೆ ಗುರು ನೀಡಿದ ಪ ಜೀವನ ಸುಖದುಃಖದಾ ಭಾವ ಜೋಲಿಗಳನು ಮರೆದು ದೇವ ನಾನೆ ಎಂದು ತಿಳಿದು ಪಾವನಾತ್ಮನೊಳಗೆ ಬೆರೆದು 1 ನಾನು ನೀನು ಎಂಬ ಭೇದ ಏನು ಮೋಜು ಮಾಯವಾಯ್ತು ಕಾಣದಾಯ್ತು ಜೀವಭಾವ ಜ್ಞಾನಬೋಧದಾ ಪ್ರಭಾವ2 ಭಾನ ಮರೆದು ದೇಹಮನದ ಜ್ಞಾನಗೀತೆಗಳನು ಪಾಡಿ ತಾನೆ ತಾನಾಗಿರುವ ಜ್ಞಾನಿ ಗುರುವಿನೊಳಗೆ ಕೂಡಿ 3 ಕಲ್ಪನಾವಿಲಾಸ ಪೋಗಿ ಅಲ್ಪನೆಂಬ ಮತಿಯ ನೀಗಿ ಅಲ್ಪನಾತೀತನಾದನಲ್ಪನಾದ ಶಂಕರನಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು