ನೋಡಿರೋ ನೋಡಿರೋ ಸ್ವಾಮಿ ಶ್ರೀಪಾದ
ಗೂಢಗುರುತವಾಗ್ಯದ ನಿಜಬೋಧ ಧ್ರುವ
ಕಣ್ಣಿನೊಳಗದ ಕಾಣುಗುಡುತಿದೆ
ಕಣ್ಣೆ ಕಣ್ಣೆಗೆ ಕಾಣಿಸುತಿದೆ 1
ಝಗಝಗಿಸುತಿದೆ ಥಳಥಳಿಸುತಿದೆ
ಬಗೆ ಬಗೆ ಭಾಸುತ ಹೊಳೆಯುತಲಿದೆ 2
ಕೇಳಬರುತದೆ ಹೇಳಗುಡುತದೆ
ತಾಳ ಮೃದಂಗವು ಭೋರಿಡುತದೆ 3
ಏನೆಂದ್ಹೇಳಲಿ ಸ್ವಾನಂದ ಲೀಲೆ
ಸ್ವಾನುಭವದಸುಖ ಆಲಿಸಿ ಕೇಳಿ 4
ಮಾಯಾಕಾರಗಿದು ಕೈಯಲಿಗೂಡದು
ಮಹಿಪತಿ ಸ್ವಾಮಿದಯಕೆ ಒದಗುವದು 5