ಜಯ ದೇವ ಜಯ ದೇವ ಜಯ ಮಂಗಳ ಮಹಿಮ
ದಯಗುಣದಲಿ ನಿಸ್ಸೀಮ ಜಯಗುರು ನಿರುಪಮ ಧ್ರುವ
ಅನುಭವಕಾಗುವ ಚಂದ ಸ್ವಾನುಭವದÀ ಕಂದ
ಜ್ಞಾನ ವಿಜ್ಞಾನಂದ ಘನಮಯ ನಿದ್ರ್ವಂದ್ವ
ದ್ವಂದ್ವನಿರ್ದೂಂದ್ವ ತಾನೆ ತನ್ನಿಂದ
ಎಂದೆಂದಿಗೆ ಬ್ಯಾರಿಲ್ಲ ದೋರುದು ನಿನ್ನಿಂದ 1
ದ್ವೈತಾದ್ವೈತಕೆ ರಹಿತಾಶ್ರಯಗುರು ನಿಜದಾತ
ತ್ರೈಗುಣಾತೀತ ಶಾಂತ ನಿರ್ಗುಣ ನಿಶ್ಚಿಂತಾ
ನಂತಾನಂತಕೆ ಸಂತತ ನೀನೆ ಏಕಾಂತ
ಪಂಥ ಪರಮಗುಹ್ಯಾನಿಹ ಶ್ರೀ ಅವಧೂತ 2
ಸ್ವಸಂವೇದ್ಯ ನೀ ಪೂರ್ಣಋಷಿಮುನಿಗಳ ಧ್ಯಾನ
ಲೇಸುಲೇಸಾಗಿಹ ಆತ್ಮನುಭವ ಖೂನ
ಈಶ ನೀನೊಬ್ಬನಾಗಿಹ ಅನುದಿನ
ದಾಸ ಮಹಿಪತಿ ಪ್ರಾಣ ಭಾಸ್ಕರ ಘನಕರುಣ 3