ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಜ ಭಾವಿ ಮುಖ್ಯಪ್ರಾಣನೆ ಪ ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ. ಹರಿಯಮುಂದೆ ನಿಂದು ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1 ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ ಕಾಯ ಕುಳಿತೆ ಭರದಿ ವೃಂದಾವನದಲೀ ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2 ಸುರರು ಎಲ್ಲ ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3 ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ ನಿಮ್ಮ ಮಹಿಮೆಗೇನೆಂಬೆ ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4 ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5 ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ ಕೊಂಡು ಭುವಿಯಲಿ ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6 ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು ದಾನಗೈದ ನಿನ್ನ ಸತಿಗೆ ಜ್ಞಾನಪೂರ್ಣಬಲನು ನೀನ ಹೋ 7 ಚಾರು ಭ್ರಾತೃನಿನ್ನ ಬದಿಲಿ ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8 ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ ಭಂಗ ಸತ್ಯಸರ್ವಪಾಪ ಸುರರು ಕೈವಶ 9 ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ ಘನ್ನ ಜ್ಞಾನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10 ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ ನಿತ್ಯ ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11 ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು ಕೊಡುವೆ ಕಾಮಿತಾರ್ಥವ 12 ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ ಆ ಪರೇಶ ಒಲಿದು ಜ್ಞಾನ ದೀಪ ವಿಡುವ ಹೃದಯಕಮಲದಿ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ ಕೂಪ ದಾಟ ಪೋಪ ಬೇಗಹೋ13 ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ ಅಮರ ಜ್ಞಾನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14 ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ ಸೂತ್ರ ತಾನು ಕಿಂಕಿಣೀ ಸುರಾವದಿಂದ ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15 ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16 ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17 ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18 ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19 ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20 ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21 ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ ಸದನ ವಾಜಿವಕ್ತ್ರಗೆರಗಿ ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22
--------------
ಕೃಷ್ಣವಿಠಲದಾಸರು
ಪಂಕಜ ಮಧುಪ ನಮೋ ಪ ಮೋದ ಮೋದ ಬೋಧ ಶಾಸ್ತ್ರದುರ್ವಾದಿಗಳ್ ಜೈಸಿದ ಯತಿಯೆ ನಮೋ 1 ಯೋಗಿ ನಮೋ 2 ಭೂಸುರ ಋಣ ಕ್ಲೇಶಾಪಹ ನಮೊ ನಮೊಮೂಷಕ ಬಹು ಭಯ ನಾಶ ನಮೋ ||ಕಾಶಿ ಬದರಿ ರಾಮೇಶ್ವರ ಕ್ಷೇತ್ರ ಪ್ರವಾಸಿಸಿ ಸತ್ಕಥೆ ಕರ್ತೃ ನಮೋ ||ಲೇಶ ಮಣ್ಣು ತಾ ಕೊಡುತಲಿ ವಿಪ್ರಗೆದೋಷವ ಕಳೆದಗೆ ನಮೊ ನಮೋ ||ಮೀಸಲ ಮನದಿ ನಿಷೇವಿಸೆ ಸಂಸೃತಿಶೋಷಿಪ ಶ್ರೀ ಲಾತವ್ಯ ನಮೋ 3 ಎರ್ಡು ಭುಜದಿ ಹಯವದನನ ಚರಣವಬಿಡದೆ ಧರಿಸುವಗೆ ನಮೊ ನಮೋ ||ಮೃಡನುತ ನಾ ಹರಿಘ್ಹರಿ ವಾಣದಿಕಡಲೆ ಪೂರ್ಣ ಬಿಡದೀವಗೆ ನಮೋ ||ನಡುಮನೆ ದ್ವಿಜಸುತ ನಿಲಿಸ್ಯರ್ಚಿಸಿದಾಉಡುಪಿನ ಕೃಷ್ಣಾರ್ಚಕಗೆ ನಮೊ ||ಸಡಗರದಲಿ ಪರ್ಯಾಯಗಳನು ಮಾರ್ಪಡಿಸಿರುವಾತಗೆ ನಮೋ ನಮೋ 4 ಪತಿ ವಿಜಯವ ತಾಬರೆದು ಪೂಣೆಯಲಿ ಮೆರೆದಗೆ ನಮೋ ||ಎರಡೆರಡೊಂದು ವೃಂದಾವನ ಸ್ವಾದಿಲಿಸುರನದಿ ತಟ ನಿಲಿಸಿದವಗೆ ನಮೋ ||ಎರಡೊಂದು ವಿಕ್ರಮನುತ್ಸವ ಗೈಸಿದಗುರು ಗೋವಿಂದ ವಿಠಲಾರ್ಚಕಗೆ ನಮೋ 5
--------------
ಗುರುಗೋವಿಂದವಿಠಲರು
ವಾದಿರಾಜಗುರು ನಿಮ್ಮಡಿಗೆರಗುವೆ ಸಾದರದಿಂದಲಿ ಮಂದನ ಕೈಪಿಡಿಯೋ ಪ ಸಾಧುಜನಾಶ್ರಯ ಮೇದಿನೀಸುರತರು ಪಾದವಪಿಡಿದಿಹೆ ಬೋಧಿಸು ವಿಜ್ಞಾನ ಅ.ಪ. ಕಾದಿಡೆ ಸುಜನಕೆ ಮಧ್ವಾಗಮನಿಧಿ ಸಾದರದುದಿಸಿದಿ ಬುಧಜನಕುಲಮೌಳಿ ಬೂದಿಯ ಮಾಡುತ ದುರ್ಮತಜಾಲವ ಮಾಧವ ಮಧ್ವರ ಸೇವೆಯ ಸಲ್ಲಿಸಿದೇ 1 ಕವಿತಾವನಿತೆಯ ಕುಣಿಸುತ ಶಾಸ್ತ್ರವ ನವವಿಧ ರಸದಿಂ ಪೇಳಿದೆ ಶಿಷ್ಯರಿಗೆ ಭುವಿಯಲಿ ಮೆರೆದೆಯೋ ಮಧ್ವಾನುಜ ತೆರ ಪವನ ಮತಾಬ್ಧಿಯ ಸೋಮನೆ ಶರಣೆಂಬೆ2 ರಿಕ್ತಬ್ರಹ್ಮನ ಭಕ್ತರ ನೊಲ್ಲನು ಯುಕ್ತಿಗಳೆಂಬುವ ಮಲ್ಲಿಗೆ ಪಟ್ಟಲಿ ಶಕ್ತಯತೀಂದ್ರನೆ ಅಡಗಿಸಿ ಸರ್ವೋ- ದ್ರಿಕ್ತನ ಗುಣಗಣ ಸಾಧಿಸಿ ನೀ ಮರೆದೇ3 ತೀರ್ಥಕ್ಷೇತ್ರವ ಪಾವನಗೈಯ್ಯಲು ಸುತ್ತುತನೀಡಿದೆ ತೀರ್ಥಪ್ರಬಂಧವನೂ ಪಾರ್ಥಿವ ಮೊರೆಯಿಡೆ ಅಕ್ಷತೆನೀಡುತ ಶತ್ರುಗಳಳಿಸುತ ಪೊರೆದೆಯೊ ಕರುಣಾಳು4 ಅರವತ್ನಾಲ್ಕು ಕಲಾಜ್ಞನೆ ಗುಣನಿಧಿ ಸುರಗಣಗಚ್ಚಿರಿಯೇ ಸರಿ ತವ ಮಹಿಮ ಹರಿಸಿದೆ ಮೃತ್ಯುವ ರಾಜನ ಅಳಿಯಗೆ ಸಿರಿಪತಿ ವ್ಯಾಸರ ಕಂಡೆಯೊ ಪ್ರತ್ಯಕ್ಷ5 ಗುಂಡಕ್ರಿಯೆ ವೈಕುಂಠ ವರ್ಣನೆ ಕಂಡಕಂಡಪದ ಪುಂಜವ ಪಾಡುತಲೀ ಕೂಡದು ಭಾಷಾ ಸಡಗರ ವೆಂಬುದ ಪಂಡಿತನಿಕರಕೆ ತೋರಿದೆ ಯತಿತಿಲಕಾ6 ಜಂಗಮಗರುವನ ಭಂಗಿಸೆ ತವಕದಿ ಇಂಗಿಸಿ ಸಲಹಿದೆ ವಿಪ್ರರ ಕಷ್ಟಗಳ ಗಂಗಾಪಿತ ತ್ರಿವಿಕ್ರಮ ದೇವನ ಮಂಗಳ ಸುರಿಸಲು ಸ್ವಾದಿಲಿ ಸ್ಥಾಪಿಸಿದೆ7 ಗೋಧರ ಹಯಮುಖ ಸಾಕ್ಷಾತ್ತಿ ಎಂಬುವ ಛಂದದಿ ನೀಡಿದ ಓದನವೆಂತೆನೆ ಸಾಧ್ಯವೆ ಶೇಷನು ಪೊಗಳಲು ನಿಮ್ಮನು ಮಂದಿರನವನಿವ ನೆನ್ನುತ ಕೈ ಪಿಡಿಯೋ8 ಇಂದ್ರನ ದೂತರ ತಡೆಯುತ ದಿನತ್ರಯ ಚಂದದಿ ಕುಳಿತೆಯಾ ಬೃಂದಾವನದೊಳಗೆ ಇಂದಿಗು ನೋಳ್ಪರು ಬುಧಜನ ನಿಮ್ಮನು ವೃಂದಾರಕಗಣ ವಂದಿತ ಚರಣಯುಗ9 ಸುಂದರ ಹಯಮುಖ ರಾಮನು ಕೃಷ್ಣನು ವೇದವ್ಯಾಸರು ಹನುಮಾದಿ ತ್ರಯರು ಮಧ್ಯದಿ ಕುಳಿತಿಹ ನಿನ್ನ ಸುನಾಲ್ಕೆಡೆ ನಿಂದಿಹರೆಂಬುದು ಸಿದ್ಧವು ಮಹಮಹಿಮಾ 10 ಬೃಂದಾವನ ಪಂಚದಿ ಹರಿ ತಾನಿಹ ಚಂದದಿ ಸೇವೆಯ ಕೊಳ್ಳುತ ನಿನ್ನಿಂದ ಸುಂದರ ದಶಗಳ ಪಂಚನುರೂಪವ ವಂದಿಸಿ ನೋಡುತ ನೆನೆಯುವೆ ಏನೆಂಬೆ11 ಗಂಗಾಪಿತ ತ್ರಿವಿಕ್ರಮದೇವನ ಹಿಂಗದೆ ನೆನೆಯುವೆ ಲಕ್ಷಾಭರಣವನು ರಂಗಗೆ ನೀಡಿದೆ ನಮ್ಮಯ ಭವವನು ಇಂಗಿಸೆ ಕಷ್ಟವೇ ಗುರುವರ ದಯಮಾಡೋ12 ಜಯಮುನಿ ಹೃದಯದಿ ವಾಯುವಿನಂತರ ಜಯದಿಂ ನಲಿಯುವ ಶ್ರೀಕೃಷ್ಣವಿಠಲನ ದಯದಿಂ ತೊರಿಸು ಭಾವೀಜಯಾಸುತ ಹಯಮುಖ ಕಿಂಕರ ನಮಿಸುವೆ ಭೂಯಿಷ್ಠಾ13
--------------
ಕೃಷ್ಣವಿಠಲದಾಸರು