ಬಲ್ಲೆನೆಂದರೆ ನಾನೇನೇನರಿಯೆ
ಅರಿಯೆನಂದರೆ ಸ್ವಲ್ಪ ತಿಳಿದಷ್ಟು ಬಲ್ಲೆ ಪ
ಗುರುಚರಣದ ಸ್ಮರಣೆಯ ಮಾಡಿ ಬಲ್ಲೆ
ಪರ ಕಡಿಸಿ ಹೊಟ್ಟೆ ಹೊರವುದನರಿಯೆ
ಕೊರಳ ಕೊಯ್ವರ ಕಪಟವು ನಾನರಿಯೆ 1
ಸಾಧು ಸಮಾಗಮ ಸುಖವೆಂದು ಬಲ್ಲೆ
ವಾದಿಸುವರ ಕೂಡ ಕಾದಾಡಲರಿಯೆ
ಬೋಧಾಮೃತರಸಸ್ವಾದವು ಬಲ್ಲೆ
ವೇದ ಶಾಸ್ತ್ರಂಗಳ ಓದಿ ನಾನರಿಯೆ 2
ಶರೀರ ಸುಖವು ನಶ್ವರವೆಂದು ಬಲ್ಲೆ
ಪರಮಾತ್ಮ ತೊಲಗುವ ಪರಿಯ ನಾನರಿಯೆ
ಗುರು ವಿಮಲಾನಂದಗೆ ಹಿಂಗಲರಿಯೆ 3