ಕಾಯೊ ಬಾರೊ ಹರಿಯೆ ಕರುಣಾ ಪಯೋಂಬುಧಿ ಪ.
ಕಾಯೊ ಬಾರೊ ಕರುಣಾಂಬುಧಿ ಕಮಲದ-
ಳಾಯತ ನೇತ್ರ ರಸಾಯನ ಸುರಿವುತ ಅ.ಪ.
ಸಿಲುಕಿ ಬಾಧೆಗೊಂಡು ಬಹು
ಬೆದರುವ ದಾಸನ ಕಾದುಗೊಳ್ಳು ಕಂಬ್ವರಿಗದಾಬ್ಜಧರ
ಮಾಧವ ಮಧುಮಥನ ಮನದಿ ವಿನೋದಿಸುವ ಕಥನ ಶ್ರೀ
ಪದಾಬ್ಜಾಮೋದಯುಗ ಸಾಸ್ವಾದನಾತ್ಮಕ ವಿನೋದ ನಲಿವುತ 1
ಕತ್ತಲೆ ಮುಸುಕಿರುವ ಸಮಯದಿ ಸುತ್ತ ವ್ಯಾಘ್ರವಿರುವ ವನದಲಿ
ಸತ್ವಹೀನವಾದೆತ್ತಿನ ಕೆಡಹುವದುತ್ತಮವೆ ಪುರುಷೋತ್ತಮ ನಿನ್ನಯ
ತತ್ವಮಾರ್ಗ ತಿಳಿಸಿ ತ್ರಿಕರಣವೆತ್ತಿ ಬೋಧೆಗೊಳಿಸಿ
ಜನೋತ್ತಮನೆನಿಸುತ 2
ಇಂದಿರೇಶ ನಿನ್ನ ಚರಣವನೆಂದಿಗು ನಂಬಿದನ
ಬಂಧ ಬಿಡಿಸಿ ಕೃಪೆಯಿಂದ ಪೊರೆವನೆಂಬಂದಕಪಾಯವ
ಕರುಣಾಸಿಂಧು ನಿನ್ನ ಕೀರ್ತಿ
ಮನೋಗತ ಸಂದಣಗೊಳಿಸುತ 3