ಒಟ್ಟು 7 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಹೊಂದಿಕೆಯಲ್ಲಾ ಭಕುತಿಗೆ ಪ ಗುರುವೆಂದಾಡುತ ನೆರೆನರನಂಬಿ | ಪರಗತಿ ಮಾರ್ಗವ ಎಂತು ನೀ ಕಾಂಬಿ 1 ಕಲ್ಲಿನೊಳಗ ಹರಿಭಾವಿಸಿ ನುಡಿವೀ | ಇಲ್ಲಿ ನೋಡೆಂದರ ಸಂಶಯ ಹಿಡಿವೀ 2 ನುಡಿಯಾಪಸಾರ ಸಂಗಡಿಯೊಳು ಬೆರೆದು | ಧೃಡಗೊಳ್ಳಲಿಲ್ಲ ವಿವೇಕದ ಸಂದು 3 ಹಮ್ಮಿಲಿ ಕೇಳದೇ ಜ್ಞಾನದ ಗುಟ್ಟು | ಧರ್ಮ ಜರಿದು ಜನ ಹೋಯಿತು ಕೆಟ್ಟು 4 ತಂದೆ ಮಹಿಪತಿ ಕರುಣಿಸದನಕಾ | ಎಂದಿಗೆ ದೊರೆಯದು ಸ್ವಾತ್ಮದ ಸುಖಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬಿಡು ಬಿಡು ಮನುಜಾ ಜಡದಭಿಮಾನ ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ ಈ ಸುಖದುಃಖದ ಬಡಿದಾಟದಲಿ ಗಾಸಿಯಾಗುತಲಿ ಸಾಯುವದೇ ದಿಟ ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ 1 ಮರಳಿ ದೇಹ ಪಡೆಯದ ದಿವ್ಯ ಬೋಧ ಪರಮಶಾಂತಿ ದೊರಕಿಸುವ ಪ್ರಮೋದ ದುರುಳಸಂಸ್ಕøತಿಯ ಪಾಶದ ಛೇದ ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ 2 ಘಟ ಮರಣಕೆ ಶಿಲುಕಿದಾದರೂ ಈ ಘಟದಲಿ ನೀ ಅಮರನೆ ಇರುವೀ ಬೇಗನೆ ಜೀವನ್ಮುಕುತಿಯ ಪಡೆಯೈ ಯೋಗಿ ಶಂಕರನ ಸದ್ಬೋಧದಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬಿಡುಮನವೆ ಬಿಡದಿಹ್ಯ ಸಂಸಾರ ಪಡಕೊಂಬುದು ಮಾಡು ನೀ ಸುವಿಚಾರ 1 ವಿಚಾರದೊಳಗದ ಬಲು ವಿವೇಕ ಸೂಚಿಸಿಬಾಹುದು ಸ್ವಾತ್ಮದ ಸುಖ2 ಸ್ವಾತ್ಮದ ಸುಖ ತಿಳಿದವ ಸ್ವತ:ಸಿದ್ಧ ಮತ್ತೆಲ್ಲಿಹದವಗೆ ಭವಬಂಧ 3 ಭವಬಂಧವ ತಿಳಿಯಲುಪಾಯ ಭುವನದಲ್ಯದ ಶುಕನಳಿಕನ್ಯಾಯಾ 4 ನ್ಯಾಯವ ತಿಳಿದರೆ ನೋಯವನೆಂದು ಶ್ರಯ ತಿಳಿಯಲು ತಾ ಬಂಧು 5 ಬಂಧು ಹಗೆಯು ತನಗೆ ತಾಯೆಂದು ಸಂಧಿಸಿ ಪಾರ್ಥಗ್ಹೇಳಿದ ಹರಿ ಬಂದು 6 ಹರಿವಾಕ್ಯವೆ ಗುರುಗುಹ್ಯದ ಗುಟ್ಟು ಪರಮಾನಂದದ ಹೆಜ್ಜೆಯ ಮೆಟ್ಟು 7 ಹೆಜ್ಜೆಲೆ ನಡೆವನು ಕೋಟಿಗೊಬ್ಬವನು ಸಜ್ಜನ ಶಿರೋಮಣೆನಿಸಿಕೊಂಬುನು 8 ಶಿರೋಮಣೆನಿಕೊಂಬುದು ಗುರುಕರುಣ ಗುರುಚರಣಕೆ ಬ್ಯಾಗನೆಯಾಗು ಶರಣು 9 ಶರಣ ಹೊಕ್ಕವಗೆಲ್ಲಿಹುದು ಮರಣ ಮರಣಕ ಮರಣವ ತಂದವ ಜಾಣ 10 ಜಾಣನೆ ಜನ್ಮರಹಿತ ವಾದವನು ಜನವನ ಸಕಲ ಸಮವಗಂಡವನು 11 ಸಮಗಂಡವಗಳದಿಹ್ಯ ಶ್ರಮವೆಲ್ಲಾ ರಾಮ ವಸಿಷ್ಠರೊಳಾಡಿದ ಸೊಲ್ಲ 12 ಸೊಲ್ಲಿಗೆ ಮುಟ್ಟಿದವ ಪ್ರತಿಯಿಲ್ಲ ಎಲ್ಲರೊಳಗ ವಂದಾದವ ಬಲ್ಲ 13 ಬಲ್ಲವನೆ ಬಲ್ಲನು ಬಯಲಾಟ ಎಲ್ಲರಿಗಿದೆ ಅಗಮ್ಯದ ನೋಟ 14 ನೋಟಕ ನೀಟ ಮಾಡಿದವನು ಧನ್ಯ ನೀಟಿಲೆ ನಡೆದವ ಕೋಟಿಗೆ ಮಾನ್ಯ 15 ಕೋಟಿಗೆ ಒಬ್ಬನು ತತ್ವಜ್ಞಾನಿ ನೋಟವಗಂಡಿಹ್ಯ ಮಹಾ ಸುಜ್ಞಾನಿ 16 ಸುಜ್ಞಾನಿಗೆ ಘನಮಯ ಸುಕಾಲ ಸುಗಮ ಸುಪಥವಾಗಿಹುದನುಕೂಲ 17 ಅನುಕೂಲದ ನಿಜ ಮಾತನೆ ಕೇಳು ಅನುದಿನ ಘನಗುರು ಸೇವಿಲೆ ಬಾಳು 18 ಪರಿ ಲೇಸು ಕಳೆವುದು ಮಿಕ್ಕಿನ ಭ್ರಾಂತಿಯ ಸೋಸು 19 ಸೋಸ್ಹಿಡಿದರ ಇದೊಂದೇ ಸಾಕು ವೇಷವದೋರುವದ್ಯಾತಕೆ ಬೇಕು 20 ಬೇಕೆಂಬ ಬಯಕೆಯ ಈಡ್ಯಾಡು ಸೋಕಿ ಶ್ರೀ ಸದ್ಗುರು ಪಾದದಿ ಕೂಡು 21 ಪಡೆವುದಿದೇ ಸ್ವಸುಖ ಸಾಧನ 22
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬ್ರಹ್ಮಜ್ಞಾನ | ಬಿಡು ಬಿಡು ಬಿಡು ನೀ ಸಂಸಾರ ಧ್ಯಾನ |ಕಡೆಯಲ್ಲಿ ನಿನ್ನ ಕಳಹುವರಲ್ಲಿಗೆ | ಬಿಡದಿರು ಸದ್ಗುರುವಿನ ಧ್ಯಾನ ಪ ಯಾತಕೆ ಕಲಿತ್ಯೋ ಬಹು ಯುಕ್ತಿಗಳ | ಬರಿ ಮಾತಿಲಿ ಆಗದು ನಿಜ ಮುಕ್ತಿ | ನೀತಿಯಿಂದ ನೀ ಅರಿತು ನೋಡಲು | ಸ್ವಾತ್ಮದ ಜ್ಞಾನವು ಆಗುವದಿದಕೆ1 ಸತಿ ಸುತರಾ ನೀ ನೋಡಿ ಹಿಗ್ಗುತಿ | ಮಿತಿಯಿಲ್ಲದೆ ಅವರಿಗೆ ತಗ್ಗುತಿ | ಗತಿಯ ಕೊಡುವ ಸಂತರು ಬಂದರೆ | ಮೋತಿಯ ತಿರುವಿ ವ್ಯಸನಕೆ ತಗ್ಗುತಿ 2 ಸಾಧು ಪುರುಷರ ಸಂಗವ ಹಿಡಿಯೊ | ಬೋಧಾಮೃತವನು ನೀ ಕುಡಿಯೊ | ಆದಿಯಲಿ ಭವತಾರಕ ಭಜಕರು | ಹೋದ ಹಾದಿಯ ನೀ ಹಿಡಿಯೊ 3
--------------
ಭಾವತರಕರು